ಶಿರಸಿ: ಶಿವಮೊಗ್ಗದಲ್ಲಿ ಜ.೭ರಂದು ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕು. ಕಾಂಚಿಕಾ ಮಹೇಶ್ ನಾಯ್ಕ ಇಂಗ್ಲೀಷ್ ಸಿದ್ಧ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಸ್ವಂತ ಪರಿಶ್ರಮದ ಮೂಲಕ ಕಾಂಚಿಕಾ Necessity of moral values in present time ಬಗ್ಗೆ ಭಾಷಣ ಮಾಡಿದ್ದು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಗಣೇಶ್ ನಗರದ ನಿವಾಸಿಯಾದ ಈಕೆ ಮಹೇಶ್ ಗೋವಿಂದ ನಾಯ್ಕ ಮತ್ತು ಉಮಾ ನಾಯ್ಕ ಇವರ ಪುತ್ರಿಯಾಗಿದ್ದಾಳೆ.
ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಶ್ ವಿ ನಾಯ್ಕ, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಈಕೆಯ ಸಾಧನೆಗೆ ಅಭಿನಂದಿಸಿದ್ದಾರೆ.
ಪ್ರತಿಭಾ ಕಾರಂಜಿ: ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ
