ಕುಮಟಾ: ತಾಲ್ಲೂಕಿನ ಬರ್ಗಿಯ ಸರಕಾರಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕ ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯಾಧ್ಯಕ್ಷ ಮಂಜುನಾಥ ಗಾoವಕರ ಬರ್ಗಿಯವರಿಗೆ ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿ ಶ್ರೀ ಶ್ರೀ ಶ್ರೀ ಸುಬುಧೇoದ್ರ ತೀರ್ಥ ಸ್ವಾಮೀಜಿಗಳು ದಾಂಡೇಲಿಯ ಮಾಸ್ಕೇರಿ ಸಾಹಿತ್ಯರಾಧನಾ ಪ್ರತಿಷ್ಠಾನ ಹಾಗೂ ಭಾರತೀ ಪ್ರಕಾಶನದ ‘ಶ್ರೀ ಗಂಧಹಾರ’ ಪ್ರಶಸ್ತಿಯನ್ನು ‘ವಾಕ್ಕೊವಿದ‘ ಬಿರುದು ಸಹಿತವಾಗಿ ಪ್ರದಾನ ಮಾಡಿದರು.
ಮಂಜುನಾಥ ಗಾಂವಕರ ಬರ್ಗಿಯವರ ಸಾಹಿತ್ಯ, ಸಂಘಟನೆ, ಯಕ್ಷಗಾನ, ವಾಕ್ಪಟುತ್ವ, ಹಾಗೂ ಶಿಕ್ಷಣ ಪ್ರೇಮವನ್ನು ಪರಿಗಣಿಸಿ ‘ಶ್ರೀಗಂಧಹಾರ ಪ್ರಶಸ್ತಿ -2022-23’ ಕ್ಕೆ ಆಯ್ಕೆಗೊಳಿಸಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಸ್ಕೇರಿಯ ಸಾಹಿತ್ಯರಾಧನಾ ಪ್ರತಿಷ್ಠಾನದ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಹೆಸರಾಂತ ಕವಿ -ಸಾಹಿತಿ ಮಾಸ್ಕೇರಿಯ ಎಮ್. ಕೆ. ನಾಯಕ, ಶರಣ -ಚಿಂತಕ ಶಂಕರ ಮುಂಗರವಾಡಿ ಹಾಗೂ ಕುವೆಂಪು ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟಿ ಮೊದಲಾದವರಿದ್ದರು.