Slide
Slide
Slide
previous arrow
next arrow

ಗುರು, ಗುರುಕುಲ ಮರೆಯಬೇಡಿ: ರಾಘವೇಶ್ವರ ಶ್ರೀ

300x250 AD

ಗೋಕರ್ಣ: ಬಾಳಿಗೆ ಬೆಳಕು ನೀಡುವ ಗುರು ಹಾಗೂ ಗುರುಕುಲವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಎರಡು ದಿನಗಳ ಕಾಲ ನಡೆದ ಪ್ರಥಮ ‘ವಿದ್ಯಾಪರ್ವ’ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಹಾಗೂ ವಿಸ್ತೃತವಾಗಿ ಇಡೀ ಜೀವನದಲ್ಲಿ ಶಿಸ್ತು ಮುಖ್ಯ. ಶಿಸ್ತು ಅಳವಡಿಸಿಕೊಂಡ ವ್ಯಕ್ತಿ ಸಹಜವಾಗಿಯೇ ಉನ್ನತ ಸ್ಥಾನಕ್ಕೆ ಏರುತ್ತಾನೆ. ಆದ್ದರಿಂದ ಎಳವೆಯಲ್ಲೇ ಮಕ್ಕಳು ಶಿಸ್ತು ರೂಢಿಸಿಕೊಂಡು ಜೀವನದಲ್ಲಿ ಉನ್ನತಿ ತಲುಪುವ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.
ಸ್ಪೆಕ್ಟ್ರಮ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ವಿ.ಸುದರ್ಶನ್ ಆಗಮಿಸಿದ್ದರು. ರಘುನಂದನ ಬೇರ್ಕಡವು ಅವರು ಸ್ವಾಗತಿಸಿದರು. ಕಾರ್ಯಕ್ರಮವು ಶಂಖನಾದ, ಗುರುವಂದನೆ, ವೇದಘೋಷದೊಂದಿಗೆ ಆರಂಭವಾಯಿತು. ವಿವಿವಿ ಆಡಳಿತ ಮಂಡಳಿ ಸರ್ವಾಧ್ಯಕ್ಷ ಡಿ.ಡಿ. ಶರ್ಮಾ ದೀಪಜ್ವಲನವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನಲೋಕದ ಹಾಸ್ಯ ದಿಗ್ಗಜ ಶ್ರೀಪರಮಾನಂದ ಹಾಸ್ಯಗಾರ, ವಿದ್ಯಾಪರಿಷತ್ತಿನ ಅಧ್ಯಕ್ಷರಾದ ಪ್ರೊ.ಎಮ್.ಆರ್. ಹೆಗಡೆ, ನವಯುಗ ವರಿಷ್ಠಾಚಾರ್ಯರಾದ ಎಸ್.ಜಿ.ಭಟ್ಟ, ಪಾರಂಪರಿಕ ವರಿಷ್ಠಾಚಾರ್ಯರಾದ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯರಾದ ನರಸಿಂಹ ಭಟ್ಟ, ವ್ಯವಸ್ಥಾ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿವಿಯ ನಿರ್ದೇಶಕ ಶ್ರೀಪಾದ ಭಟ್ಟ , ಪ್ರಸಿದ್ಧ ಚೆಸ್ ಪಟು ಸದಾನಂದ ಹೆಬ್ಬಾರ್, ಪ್ರಭಾರ ಪ್ರಾಂಶುಪಾಲರಾದ ಶ್ವೇತಾ ಭಟ್ಟ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ತೇಜಸ್ವಿನಿ ಭಟ್ಟ ನಿರೂಪಿಸಿ ಶಶಿಕಲಾ ಕೂರ್ಸೆ ವಂದಿಸಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕನ್ನಡ, ಆಂಗ್ಲಭಾಷೆ ಮತ್ತು ಸಂಸ್ಕೃತ ಭಾಷೆಯಲ್ಲಿ ನಿರೂಪಣೆಯನ್ನೂ ಕಾರ್ಯಕ್ರಮದ ನಿರ್ವಹಣೆಯನ್ನೂ ವಿದ್ಯಾರ್ಥಿಗಳೇ ನೆರವೇರಿಸಿದರು. ಸಂಗೀತ, ನೃತ್ಯ, ವಾದ್ಯ, ನಾಟಕ, ಚಿತ್ರ, ಮೂಕಾಭಿನಯಗಳ ಮೂಲಕ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನವನ್ನು ಮಾಡಿದರು.

300x250 AD
Share This
300x250 AD
300x250 AD
300x250 AD
Back to top