ಶಿರಸಿ: ಇಲ್ಲಿಯ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ‘ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಜ.08ರಂದು ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ಗಂಟೆಯಿoದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಮನೋವೈದ್ಯ ಡಾ.ಎಸ್.ಸಿ.ಕುಲಕರ್ಣಿ ಪಾಲ್ಗೊಂಡು ಸಲಹೆ, ಚಿಕಿತ್ಸೆ ನೀಡಲಿದ್ದಾರೆ. ಕಾರಣ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ ಹಾಗೂ ಕಾರ್ಯದರ್ಶಿ ಅನಂತ ಹೆಗಡೆ ಆಶೀಸರ ಪ್ರಕಟಣೆಯಲ್ಲಿ ಕೋರಿದ್ದಾರೆ.