Slide
Slide
Slide
previous arrow
next arrow

ಜ. 12ಕ್ಕೆ ದಾವಣಗೆರೆಯಲ್ಲಿ ಯುವಜನ ಸಮಾವೇಶ: ವಿನಾಯಕ ನಾಯ್ಕ

300x250 AD

ಕಾರವಾರ: ರಾಜ್ಯದ ಯುವಕರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷದಿಂದ ಜ.12ರ ವಿವೇಕಾನಂದ ಜಯಂತಿಯoದು ದಾವಣಗೆರೆ ಜಿಲ್ಲೆಯಲ್ಲಿ ಯುವಜನ ಸಮಾವೇಶ ಹಮ್ಮಿಕೊಳ್ಳಗಿದೆ ಎಂದು ಪಕ್ಷದ ಜಿಲ್ಲಾ ಸಂಚಾಲಕ ವಿನಾಯಕ ನಾಯ್ಕ ಹೇಳಿದರು.
ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ 50ಕ್ಕಿಂತ ಹೆಚ್ಚು ಯುವಕರಿದ್ದಾರೆ. ಅವರಲ್ಲಿ ಕೌಶಲ್ಯ ಇರುವ ಯುವಕರೂ ಕೂಡಾ ಬಡತನ ಹಾಗೂ ಶಿಕ್ಷಣದ ಕೊರತೆಯಿಂದ ಶಕ್ತಿ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಗುತ್ತಿಗೆ ಆಧಾರದ ನೌಕರಿಯಲ್ಲಿದ್ದರೆ, ಇನ್ನು ಕೆಲವರು ಡ್ರಗ್ಸ್, ಬೆಟ್ಟಿಂಗ್, ಆನ್ಲೈನ್ ಗೇಮ್ ಹಾಗೂ ಕುಡಿತಕ್ಕೆ ದಾಸರಾಗಿ ನೆಮ್ಮದಿ ಕಳೆದುಕೊಂಡಿದ್ದಾರೆ. ಇವೆಲ್ಲವನ್ನು ದೂರವಾಗಿಸುವ ಬಗ್ಗೆ ಚಿಂತನೆ ನಡೆಸಲು ಯುವಜನ ಸಮಾವೇಶ ಸಾಕ್ಷಿಯಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಜ.9, 10ರಂದು ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಕರುನಾಡು ಕಟ್ಟೋಣ ಶೀರ್ಷಿಕೆಯಡಿ ಜಿಲ್ಲೆಯ ಭಟ್ಕಳದಿಂದ ಕಾರವಾರದವರೆಗೆ ಸಂಘಟನಾ ಯಾತ್ರೆ ನಡೆಸಲಿದ್ದಾರೆ. ಭಟ್ಕಳದಿಂದ ಹೊರಟು ಕುಮಟಾದಲ್ಲಿ ವಾಸ್ತವ್ಯ ಹೂಡಲಿದ್ದು, ಬಳಿಕ ಮರುದಿನ ಕಾರವಾರಕ್ಕೆ ಪ್ರಯಾಣ ಬೆಳಸಲಿದ್ದಾರೆ. ಯಾತ್ರೆಯ ಉದ್ದಕ್ಕೂ ಕಾರ್ಯಕ್ರಮದ ಪ್ರಚಾರ ಹಾಗೂ ಯುವಕರಲ್ಲಿ ಉತ್ಸಾಹ ತುಂಬಲಾಗುತ್ತದೆ. ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಕಾರವಾರದಿಂದಲೂ ಪಕ್ಷದ ಪದಾಧಿಕಾರಿಗಳು ಹಾಗೂ ಯುವಕರು ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ಪದಾಧಿಕಾರಿಗಳಾದ ಅನಿತಾ ಹರಿಕಂತ್ರ, ಪ್ರಸಾದ್ ಬೋವಿ, ಪ್ರಕಾಶ ಭೋವಿ ಹಾಗೂ ನಿತ್ಯಾನಂದ ಉಳ್ವೇಕರ ಇದ್ದರು.

300x250 AD
Share This
300x250 AD
300x250 AD
300x250 AD
Back to top