Slide
Slide
Slide
previous arrow
next arrow

ಬಿಜೆಪಿಯಿಂದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

300x250 AD

ಸಿದ್ದಾಪುರ: ಬಿಜೆಪಿ ಪಕ್ಷ ಉಳಿದೆಲ್ಲ ಪಕ್ಷಗಳಿಗಿಂತ ಭಿನ್ನವಾಗಿದ್ದು, ನಾವು ಬೂತ್, ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಆಧಾರದಲ್ಲಿ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ಬಲಪಡಿಸುತ್ತಾ ಬಂದಿದ್ದು, ಮುಂಬರುವ ವಿಧಾನಸಭೆ ಚುನಾವಣೆ ಸಹ ಇದೇ ಆಧಾರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಸಹ ಪ್ರಭಾರಿ ಪ್ರಸನ್ನ ಕೆರೇಕೈ ಹೇಳಿದರು.
ಅವರು ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನಕ್ಕೆ ಪಟ್ಟಣದ ರವೀಂದ್ರ ನಗರದ ಬೂತ್ ಸಂಖ್ಯೆ 213ರಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು. ವಿಧಾನಸಭೆ ಚುನಾವಣೆ ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ನಮಗೆ ಚುನಾವಣೆ ಎದುರಿಸಲು ನಮ್ಮ ವಯಕ್ತಿಕ ಕೆಲಸಗಳ ಹೊರತಾಗಿ ಉಳಿದಿರುವುದು ಕೇವಲ 750 ಗಂಟೆಗಳಷ್ಟೇ ಬಾಕಿಯಿದ್ದು, ಈ ಅತ್ಯಲ್ಪ ಸಮಯದಲ್ಲಿ ನಾವು ಏನೆಲ್ಲ ಕೆಲಸಗಳನ್ನು ಮಾಡಿ ಅಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಒಟ್ಟಾರೆ ಯಶಸ್ವಿ ಸಂಪರ್ಕ ಜಾಲವನ್ನು ಹೇಗೆ ವಿಸ್ತಾರ ಮಾಡಲು ಸಾಧ್ಯವಿದೆ ಎನ್ನುವ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಈ ಬೂತ್ ವಿಜಯ ಅಭಿಯಾನವನ್ನು ರಾಜ್ಯಾದ್ಯಂತ ಜ.2ರಿಂದ 10ರವರೆಗೆ ಆಯೋಜಿಸಲಾಗಿದೆ.
ಈ ಅಭಿಯಾನದಲ್ಲಿ ಪ್ರಮುಖವಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಬೂತ್ ಸಮಿತಿ ಹಾಗೂ ಪೇಜ್ ಪ್ರಮುಖರನ್ನು ನೇಮಿಸಿ ಅವರಿಗೆ ಮತದಾರರ ವಿಶ್ವಾಸವನ್ನು ಗಳಿಸುವ ಕೆಲಸವನ್ನು ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಬೇಕು. ಬೂತ್ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿ ಸಾರ್ವಜನಿಕರಿಗೆ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಬೂತ್ ಮಟ್ಟದಲ್ಲಿ ಪ್ರತೀ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಈ ಅಭಿಯಾನವನ್ನ ಯಶಸ್ವಿಯಾಗಿ ಮಾಡಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತ, ಪ್ರಸನ್ನ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಡಕೇರಿ, ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ್ ನಾಯ್ಕ, ಪಟ್ಟಣ ಪಂಚಾಯತ ಸದಸ್ಯ ನಂದನ್ ಬೋರ್ಕರ್, ನಾಮ ನಿರ್ದೇಶಿತ ಸದಸ್ಯರಾದ ಸುರೇಶ್ ನಾಯ್ಕ ಬಾಲಿಕೊಪ್ಪ, ಮಂಜುನಾಥ್ ಭಟ್, ಶಕ್ತಿಕೇಂದ್ರ ಪ್ರಮುಖ ಸುರೇಶ್ ನಾಯ್ಕ ಪ್ರಮುಖರಾದ ಆದರ್ಶ ಪೈ ಬಿಳಗಿ, ವಿಜಯ ಹೆಗಡೆ ಉಳಿದಂತೆ ಬೂತ್ ಕಮಿಟಿ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top