Slide
Slide
Slide
previous arrow
next arrow

ಕಲಾ ಪ್ರದರ್ಶನಕ್ಕೆ ಸಂಘಟಕರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಡಿ.ಕೆ. ನಾಯ್ಕ

300x250 AD

ಸಿದ್ದಾಪುರ: ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿದ್ದರೆ ಮಾತ್ರ ಅದರ ಕುರಿತು ಆಸಕ್ತಿ ಹೆಚ್ಚಾಗುತ್ತದೆ. ಕಲಾ ಪ್ರದರ್ಶನಕ್ಕೆ ಸಂಘಟಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಕಲೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪ್ರಗತಿಪರ ಕೃಷಿಕ ಡಿ.ಕೆ.ನಾಯ್ಕ ತೆಂಗಿನಮನೆ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಯಕ್ಷಚಂದನ ದಂಟಕಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಆಯೋಜಸಿದ್ದ ಯಕ್ಷಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾ.ಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ನಾಟಿ ವೈದ್ಯ ಕೆ.ಟಿ.ಗೌಡ ಮಾದ್ಲಮನೆ, ಆಧಾರ ಸಂಸ್ಥೆಯ ಅಧ್ಯಕ್ಷ  ನಾಗರಾಜ ನಾಯ್ಕ ಮಾಳ್ಕೋಡ, ವಕೀಲ ಚಂದ್ರಶೇಖರ ಹೆಗಡೆ ಹೊನ್ನೆಹದ್ದ ಉಪಸ್ಥಿತರಿದ್ದರು. ನಂತರ ಪ್ರದರ್ಶನಗೊಂಡ ಕೃಷ್ಣಾರ್ಜುನ ಯಕ್ಷಗಾನದ ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಸತೀಶ ಹೆಗಡೆ ದಂಟಕಲ್, ನಂದನ ದಂಟಕಲ್, ಶಂಕರ ಭಾಗ್ವತ್ ಯಲ್ಲಾಪುರ, ಪ್ರಸನ್ನ ಹೆಗ್ಗಾರು ಸಹಕರಿಸಿದರು.
ಮುಮ್ಮೇಳದಲ್ಲಿ ಸಂಜಯ ಬಿಳಿಯೂರು, ನರೇಂದ್ರ ಹೆಗಡೆ ಅತ್ತಿಮುರ್ಡು, ಸದಾಶಿವ ಮಲವಳ್ಳಿ, ವೆಂಕಟ್ರಮಣ ಮಾದ್ಲಕಳ್, ವೆಂಕಟೇಶ ಬಗರಿಮಕ್ಕಿ, ನಿತಿನ್ ದಂಟಕಲ್, ತುಳಸಿ ಬೆಟ್ಟಕೊಪ್ಪ ಪಾತ್ರನಿರ್ವಹಿಸಿದರು. ಸುಜಾತಾ ಹೆಗಡೆ ದಂಟಕಲ್ ಸ್ವಾಗತಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top