Slide
Slide
Slide
previous arrow
next arrow

ಪ್ರಯಾಣಿಕರ ಹಾದಿ ತಪ್ಪಿಸುತ್ತಿದೆ ಗೂಗಲ್ ಮ್ಯಾಪ್: ಪ್ರವಾಸಿಗರ ಪರದಾಟ

300x250 AD

ಹೊನ್ನಾವರ: ತಾಲೂಕಿನಿಂದ ಸಿದ್ದಾಪುರಕ್ಕೆ ಹೊಸ ಮಾರ್ಗದ ಹುಡುಕಾಟದಲ್ಲಿರುವ ವಾಹನ ಸವಾರರಿಗೆ ಗೂಗಲ್ ಮ್ಯಾಪ್ ನಂಬಿ ಹಿರೇಬೈಲ್ ರಸ್ತೆಯಲ್ಲಿ ಸಾಗಿ ಮುಂದೆ ದಾರಿ ಕಾಣದೇ ಪ್ರವಾಸಿಗರು ಪರದಾಡುವ ಸ್ಥಿತಿ ಎದುರಾಗಿದೆ.
ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆಗಮಿಸುವ ನೂರಾರು ಪ್ರವಾಸಿಗರು ಹೊನ್ನಾವರ, ಕುಮಟಾ, ಭಟ್ಕಳ ತಾಲೂಕಿನಿಂದ ಸಿದ್ದಾಪುರ ಮಾರ್ಗದ ಮೂಲಕ ನೆರೆ ಜಿಲ್ಲೆ, ರಾಜ್ಯಗಳಿಗೆ ಸಾಗುವ ಹೆಚ್ಚಿನವರು ತಮಗಿರುವ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿ ತೊಡಗುತ್ತಾರೆ. ಇತ್ತೀಚೆಗೆ ಅಪರಿಚಿತ ಸ್ಥಳಗಳಿಗೆ ಹೋಗುವಾಗ ಬಹುತೇಕ ಚಾಲಕರು ಗೊಗಲ್ ಮ್ಯಾಪ್‌ನ್ನು ಅವಲಂಬಿಸುತ್ತಿದ್ದಾರೆ. ಗೂಗಲ್ ಮ್ಯಾಪ್ ನಂಬಿದ ಚಾಲಕರು ಆರೇಅಂಗಡಿ, ಚಿಕ್ಕೊಳ್ಳಿ, ಹಿರೇಬೈಲ್ ರಸ್ತೆಯಲ್ಲಿ ಸಾಗಿ ಕೊನೆಗೆ ಸಿದ್ದಾಪುರಕ್ಕೆ ಸಂಪರ್ಕ ಸಾಧ್ಯವಾಗಲೇ ಅತ್ತ ಬಂದ ದಾರಿಯಲ್ಲಿ ಹಿಂತಿರುಗುವದಕ್ಕೂ ಆಗದ ಚಡಪಡಿಸುತ್ತಾರೆ.
ಗೇರುಸೊಪ್ಪಾ, ಮಾವಿನಗುಂಡಿ ಮಾರ್ಗದ ಹೊರತಾಗಿ ಹೊನ್ನಾವರ, ರಾಮತೀರ್ಥ ಆರೇಅಂಗಡಿ ಚಂದಾವರ ಮೂಲಕ ಸಾಗಿದರೂ ಸಿದ್ದಾಪುರವನ್ನು ತಲುಪಬಹದು. ಕುಮಟಾದಿಂದ ಚಂದಾವರ ಮಾರ್ಗದಲ್ಲಿ ಗೂಗಲ್ ವಾಪ್ ಹಾಕಿಕೊಂಡು ಬಂದಾಗ ಚಂದಾವರ ನಾಕಾ ಹತ್ತಿರ ಬಂದಾಗ ಎಡಕ್ಕೆ ಮತ್ತು ಬಲಕ್ಕೆ ಎರಡೂ ದಿಕ್ಕಿಗೂ ಮಾರ್ಗವನ್ನು ಸೂಚಿಸುತ್ತದೆ, ಆಕಸ್ಮಿಕವಾಗಿ ಬಲಕ್ಕೆ ತಿರುಗಿದರೆ ಅರೇಅಂಗಡಿ, ಚಿಕೊಳ್ಳಿ, ಹಿರೇಬೈಲವರೆಗೆ ಮಾತ್ರ ರಸ್ತೆಯದ್ದು ಮುಂದೆ ಹೋಗಲಾರದೇ ಕಕ್ಕಾಬಿಕ್ಕಿಯಾಗುತ್ತಾರೆ. ಹೊನ್ನಾವರ ಪಟ್ಟಣದಿಂದ ರಾಮತೀರ್ಥದ ಮೂಲಕ ಸಾಗಿದರೂ ಅರೇಅಂಗಡಿ ತಲುಪಿದಾಗ ಎರಡು ಮಾರ್ಗ ತೊರಿಸುತ್ತಿದ್ದು, ಚಂದಾವರ ಮಾರ್ಗ ಹೊಗದೇ, ತೊಳಸಾಣಿ ಮಾರ್ಗದ ಮೂಲಕ ಸಾಗಿದರೆ ದಿಕ್ಕು ತೋಚದಂತಾಗುತ್ತದೆ.
ಅರೇಅoಗಡಿ ಮೂಲಕ ಚಿಕ್ಕೋಳಿಯವರೆಗೆ ರಸ್ತೆ ಸಮರ್ಪಕವಾಗಿದ್ದು, ನಂತರ ರಸ್ತೆಯೂ ಇಲ್ಲದೆ ನೆಟವರ್ಕ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಈ ಹಿಂದೆ ಗೂಗಲ್ ಮ್ಯಾಪ್ ನಿಂದ ಇದನ್ನು  ತೆಗೆಯಲು ಸ್ಥಳಿಯರು ಅಧಿಕಾರಿಗಳ ಬೆನ್ನಿಗೆ ಬಿದ್ದು, ತೆಗೆಸುವಲ್ಲಿ ಯಶ್ವಸಿಯಾಗಿದ್ದರು. ಕಳೆದ ಎರಡು ದಿನ ಮುಂಜಾನೆಯಿoದ ಸಾಯಂಕಾಲದವರೆಗೆ ನಿರಂತರವಾಗಿ ಕಾರು ಓಡಾಡುತ್ತಿದೆ. ಸ್ಥಳಿಯರು ಅಲ್ಲಲ್ಲಿ ಕಾರು ತಡೆದು ಬದಲಿ ಮಾರ್ಗದ ಮಾಹಿತಿ ನೀಡುವ ಮೂಲಕ ನೆರವಾಗುತ್ತಿದ್ದಾರೆ.
ಸಂಬoಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಪ್ರವಾಸಿಗರಿಗೆ ನೆರವಾಗಬೇಕಿದೆ. ಈ ಹಿಂದೆ ತಾಲೂಕಿನ ದಂಡಾಧಿಕಾರಿ ನಾಗರಾಜ ನಾಯ್ಕಡ್, ವಿಶೇಷ ಮುತುವರ್ಜಿ ವಹಿಸಿದ್ದ ಸಿಪಿಐ ಶ್ರೀಧರ ಎಸ್.ಆರ್. ಹಿರಿಯ ಅಧಿಕಾರಿಗಳ ಮೂಲಕ ಮ್ಯಾಪ್‌ನಲ್ಲಿ ಈ ಮಾರ್ಗವನ್ನು ತೆಗಿಸಿದ್ದರು.

ಕೋಟ್…
ಹೊರಗಡೆಯಿಂದ ಆಗಮಿಸುವವರು ಗೂಗಲ್ ಮ್ಯಾಪ ನಂಬಿ ಪ್ರಯಾಣಿಸುದು ಸಹಜವಾಗಿದೆ. ಆದರೆ ರಸ್ತೆ ಸರಿಯಾಗಿರದೇ  ಈ ರೀತಿ ಮಾರ್ಗ ತೋರಿಸುವುದು ಪ್ರವಾಸಿಗರಿಗೆ ಮಾಡುವ ಅನ್ಯಾಯವಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷವಾಗಿ ಗಮನಹರಿಸಿ ನೆರವಾಗಬೇಕಿದೆ.
• ಶ್ರೀನಿವಾಸ ಶೆಟ್ಟಿ, ಕೆರೆಕೋಣ ನಿವಾಸಿ

300x250 AD
Share This
300x250 AD
300x250 AD
300x250 AD
Back to top