ಭಟ್ಕಳ: ನಗರದ ಆಸರಕೇರಿಯ ನಾಮಧಾರಿ ಸಮಾಜದ ಗುರುಮಠ ಶ್ರೀನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ವಿಶೇಷ ಪೂಜೆ ಪುನಸ್ಕಾರ ನಡೆಯಿತು.
ಶ್ರೀದೇವರ ಉತ್ಸವ ಮೂರ್ತಿಯನ್ನು ದಕ್ಷಿಣ ದ್ವಾರದಲ್ಲಿ ಅಲಂಕರಿಸಿ ಪಲ್ಲಕ್ಕಿಯಲ್ಲಿರಿಸಿ ಪೂಜಿಸಲಾಯಿತು. ಭಕ್ತಾದಿಗಳು ವಿಶೇಷವಾಗಿ ದೇವಸ್ಥಾನದ ದೇವಾಲಯದ ದಕ್ಷಿಣ ದ್ವಾರದ ಮೂಲಕ ಪ್ರವೇಶಿಸಿ ಶ್ರೀದೇವರ ದರ್ಶನ ಪಡೆದು ಶ್ರೀದೇವರ ಪಲ್ಲಕ್ಕಿಯಡಿಯಲ್ಲಿ ಉತ್ತರ ದ್ವಾರದ ಮೂಲಕ ಹೊರಬಂದು ವಿಶೇಷ ಆಚರಣೆ ನಡೆಸಿದರು. ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಸರತಿಯ ಸಾಲಿನಲ್ಲಿ ಬಂದು ಶ್ರೀವೆಂಕಟೇಶ್ವರನಿಗೆ ವಿಶೇಷ ಪೂಜೆ ನಡೆಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ನಾಯ್ಕ, ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಸದಸ್ಯರಾದ ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ಶಿವರಾಮ ನಾಯ್ಕ, ಗಿರೀಶ ನಾಯ್ಕ, ಸುರೇಶ ನಾಯ್ಕ, ನಾರಾಯಣ ನಾಯ್ಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲು ಸಹಕರಿಸಿದರು.