Slide
Slide
Slide
previous arrow
next arrow

ಕಳಚೆ ಪ್ರೀಮಿಯರ್ ಲೀಗ್: ಶಿರಸಿಯ ಟೀಮ್ ಮಲ್ಲಿಕಾರ್ಜುನ ಪ್ರಥಮ

300x250 AD

ಯಲ್ಲಾಪುರ: ಕಳಚೆ ಪ್ರೀಮಿಯರ್ ಲೀಗ್ ಸೀಸನ್- 3 ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿರಸಿಯ ಟೀಮ್ ಮಲ್ಲಿಕಾರ್ಜುನ ಪ್ರಥಮ, ಡ್ರೀಮ್ ಚೇಂಜರ್ಸ್ ದ್ವಿತೀಯ ಬಹುಮಾನ ಪಡೆದಿವೆ. ಪಂದ್ಯಶ್ರೇಷ್ಠ ಟೀಮ್ ಮಲ್ಲಿಕಾರ್ಜುನ ತಂಡದ ಹರ್ಷಮಣಿ ಪಾಲಾಗಿದೆ.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಕಳಚೆಯಂತಹ ದುರ್ಗಮ ಪ್ರದೇಶಕ್ಕೆ ಹದಿನಾರು ತಂಡಗಳನ್ನು ಆಮಂತ್ರಿಸಿ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಸಿರುವುದು ಸಾಮಾನ್ಯ ಸಂಗತಿಯಲ್ಲ. ನಾವು ಎಷ್ಟೇ ದೊಡ್ಡ ಸ್ಥಾನಮಾನಕ್ಕೆ ಏರಲಿ, ಯಾವುದೇ ಹುದ್ದೆಯನ್ನು ಅಲಂಕರಿಸಲಿ, ನಾವು ಹುಟ್ಟಿ ಬೆಳೆದ ನಮ್ಮ ಊರುಗಳನ್ನು ಯಾವುದಾದರೂ ರೂಪದಲ್ಲಿ ಬೆಳಕಿಗೆ ತರಬೇಕಾಗುತ್ತದೆ. ಜನಾರ್ಧನ ಹೆಬ್ಬಾರ್, ಮೂರು ಕಳಚೆ ಪ್ರಿಮೀಯರ್ ಲೀಗ್ ಮೂಲಕ ಕಳಚೆ ಗ್ರಾಮವನ್ನು ನಾಡಿಗೆ ಪರಿಚಯಿಸುವ ಕೆಲಸಮಾಡಿದ್ದಾರೆ. ಯುವಕರು ಹೆಚ್ಚಿನ ಸಮಯ ಮೈದಾನದಲ್ಲಿಯೇ ಕಳೆಯುವುದರಿಂದ ಬೇರೆಲ್ಲ ಚಟುವಟಿಕೆಗಳು ಕಡಿಮೆಯಾಗುತ್ತವೆ. ಈ ನಿಟ್ಟಿನಲ್ಲಿ ಕಳಚೆ ಗ್ರಾಮದ ಯುವಕರು ಒಂದು ಹೆಜ್ಜೆ ಮಂದೆ ಇದ್ದು ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಧಾತ್ರಿ ಪೌಂಡೇಶನ್ ಅಧ್ಯಕ್ಷ ಶ್ರೀನಿವಾಸ್ ಭಟ್ ಧಾತ್ರಿ ಮಾತನಾಡಿ, ಕಳಚೆ ಗ್ರಾಮ  ಕಲೆ ಸಂಸ್ಕ್ರತಿ ಸಂಸ್ಕಾರಕ್ಕೆ ಹೆಸರುಮಾಡಿರುವ ಗ್ರಾಮವಾಗಿದೆ. ಅದರ ಮುಂದುವರೆದ ಭಾಗವಾಗಿ ಸ್ಥಳೀಯವಾಗಿ ಹಮ್ಮಿಕೊಂಡ ಕ್ರೀಡಾಕೂಟ ಇಂದು ಜಿಲ್ಲಾ ಮಟ್ಟದವರೆಗೆ ವಿಸ್ತರಿಸಿದೆ. ಮುಂದಿನ ವರ್ಷದಿಂದ ರಾಜ್ಯ ಮಟ್ಟದವರೆಗೆ ವಿಸ್ತಾರಕೊಳ್ಳಲಿದೆ ಎಂದು ತಿಳಿದುಬಂದಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಆರೋಗ್ಯ ಹಾಗೂ ದೈಹಿಕ ಸದೃಢವಾಗಿರಲು ವ್ಯಾಯಾಮ ಕ್ರೀಡೆ ಅತ್ಯವಶ್ಯವಾಗಿದೆ. ಕಳಚೆ ಪ್ರಿಮಿಯರ್ ಲೀಗ್ ಈ ಭಾಗದಲ್ಲಿ ಉತ್ಸವವಾಗಿ ಪರಿವರ್ತನೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯಕಾರಿಣಿ ಸದಸ್ಯ ನಾಗರಾಜ ಮದ್ಗುಣಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಕಳಚೆ ಗ್ರಾಮಸ್ಥರು ನಲುಗಿ ಹೋಗಿದ್ದರು. ಮುಂದಿನ ಭವಿಷ್ಯದ ಬಗ್ಗೆ ತೀವ್ರವಾದ ನೋವನ್ನು ಅನುಭವಿಸುತ್ತಿದ್ದರು. ಇಲ್ಲಿ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾವಳಿ ನೋವು ನಿವಾರಿಸುವ ಮುಲಾಮನಂತೆ ಸ್ಥಳೀಯ ಜನರ ಮನಸ್ಸನ್ನು ಉಲ್ಲಸಿತಗೊಳಿಸಿದೆ ಎಂದು ಹೇಳಿದರು.
ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಮಾತನಾಡಿ, ಕಳಚೆ ಗ್ರಾಮದಲ್ಲಿ ಯುವಕರ ಉತ್ಸಾಹದಿಂದಾಗಿ ಉತ್ತಮವಾದ ಕ್ರಿಕೇಟ್ ಪಂದ್ಯಾವಳಿಗಳು ನಡೆಯುತ್ತಿದೆ. ಮಕ್ಕಳು ಹಾಗೂ ಯುವಕರು ಹೆಚ್ಚು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಒತ್ತಡಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ವಜ್ರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀಣಾ ಗಾಂವ್ಕರ್, ಸದಸ್ಯ ಗಜಾನನ ಭಟ್ ಸುತ್ರೆ, ವಕೀಲರಾದ ಜಿ.ಆರ್.ಹೆಗಡೆ, ಮಾವಿನಮನೆ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳಮನೆ, ಸಂಘಟಕರಾದ ಕಳಚೆ ಪ್ರೀಮಿಯರ್ ಲೀಗ್ ಅಧ್ಯಕ್ಷ ಜನಾರ್ದನ ಹೆಬ್ಬಾರ್, ಗೌರವಾಧ್ಯಕ್ಷ ಪ್ರಕಾಶ ಹೆಗಡೆ, ಕಾರ್ಯಾಧ್ಯಕ್ಷ ಪ್ರಮೋದ್ ಹೆಬ್ಬಾರ್ ಮತ್ತು ಅನಂತ ಹೆಗಡೆ ಪ್ರೀಮಿಯರ್ ಲೀಗ್ ಇನ್ನಿತರ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

300x250 AD
Share This
300x250 AD
300x250 AD
300x250 AD
Back to top