Slide
Slide
Slide
previous arrow
next arrow

ಕುದುರೆ ಸವಾರಿ ಆತ್ಮವಿಶ್ವಾಸಕ್ಕೆ ಸಹಕಾರಿ: ರಾಘವೇಶ್ವರ ಶ್ರೀ

300x250 AD

ಗೋಕರ್ಣ: ಕುದುರೆ ಸವಾರಿ ನಮ್ಮ ಜೀವನಕ್ಕೆ ಆತ್ಮವಿಶ್ವಾಸ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕುದುರೆ ಸವಾರಿಯಲ್ಲಿ ವೇಗ ಎಷ್ಟು ಮುಖ್ಯವೋ ನಿಯಂತ್ರಣ ಹಾಗೂ ಪ್ರೀತಿ ಕೂಡಾ ಅಷ್ಟೇ ಮುಖ್ಯ. ಇವು ನಮ್ಮ ಬದುಕಿಗೆ ಮಾರ್ಗದರ್ಶಿ ತತ್ವಗಳೂ ಆಗಿವೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಭಿವೃದ್ಧಿಪಡಿಸಿರುವ ಅಶ್ವಶಾಲೆ ‘ಪದಲಯ’ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಬದುಕು ಕೂಡಾ ಒಂದು ಕುದುರೆ ಇದ್ದಂತೆ. ಆ ಕುದುರೆಯನ್ನು ಏರಿ ಸವಾರಿ ಮಾಡಬೇಕು. ಅದಕ್ಕೆ ಸೂಕ್ತ ತಯಾರಿ ಇಲ್ಲದಿದ್ದರೆ ಪತನವಾಗುತ್ತದೆ. ಆ ಆತ್ಮವಿಶ್ವಾಸವನ್ನು ಕುದುರೆ ಸವಾರಿ ನಮಗೆ ನೀಡುತ್ತದೆ. ಜೀವನವನ್ನು ಪ್ರೀತಿ ಮಾಡುವ ಮಹತ್ವವನ್ನೂ ಇದು ಕಲಿಸಿಕೊಡುತ್ತದೆ ಎಂದು ಬಣ್ಣಿಸಿದರು. ಜೀವನವನ್ನು ಕೂಡಾ ಪ್ರೀತಿಯಿಂದ ನಿಯಂತ್ರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಾರ್ಮಿಕವಾಗಿ ನುಡಿದರು.
ಜಗತ್ತಿನ ಯಾವುದೇ ವಾಹನಗಳಿಗಿಂತ ಹೆಚ್ಚು ಬೆಲೆ ಬಾಳುವಂಥದ್ದು ಕುದುರೆ. ಅದಕ್ಕೆ ಹಣದಿಂದ ಬೆಲೆ ಕಟ್ಟಲಾಗದು. ಅದು ಅಮೂಲ್ಯ. ಇದನ್ನು ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ವಿಶ್ವವಿದ್ಯಾಪೀಠಕ್ಕೆ ಗೋವುಗಳು ಕಣ್ಣಿದ್ದಂತೆ; ಅಶ್ವಶಾಲೆ ಕಾಲುಗಳಿದ್ದಂತೆ. ನಮ್ಮ ಚಲನೆಯ ಸಂಕೇತ ಎಂದರು. ವಿದ್ಯಾರ್ಥಿಗಳು ಈ ಅಶ್ವಶಾಲೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಪ್ರಕೃತಿಯ ಬಗ್ಗೆ, ನೆಲ- ಜಲ, ಪ್ರಾಣಿ- ಪಕ್ಷಿಗಳು ಹೀಗೆ ಪ್ರತಿಯೊಂದರ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಿ ಎಂದು ಸಲಹೆ ಮಾಡಿದರು.
ಕರ್ನಾಟಕ ಇಂಡೀಜೀನಿಯಸ್ ಹಾರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಲಕ್ಷ್ಮೀಕಾಂತರಾಜ್ ಅರಸ್, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಮೇಖಲಾ ಕಾಗ್ಲಿ, ಖಜಾಂಚಿ ಎಂ.ಅಶ್ವಿನ್, ಕಾನೂನು ವಿಭಾಗದ ಸಚಿನ್ ಎಸ್.ಈರೇಶನವರ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವ್ಯವಸ್ಥಾಪಕ ಮನು, ರವಿಶಂಕರ್ ಕಡತೋಕ ಮತ್ತಿತರರು ಉಪಸ್ಥಿತರಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲದ ವಿದ್ಯಾರ್ಥಿಗಳಿಗೆ ಕುದುರೆ ಸವಾರಿ ಅಭ್ಯಾಸಕ್ಕಾಗಿ (ಅಶ್ವಾರೋಹ) ಈ ಅಶ್ವಶಾಲೆ ಅಭಿವೃದ್ಧಿಪಡಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top