• first
  Slide
  Slide
  previous arrow
  next arrow
 • ಕಾರವಾರ- ಇಳಕಲ್ ಹೆದ್ದಾರಿಯ ಒತ್ತುವರಿ ತೆರವು ಮಾಡಲು ಒತ್ತಾಯ

  300x250 AD

  ಕಾರವಾರ: ನಗರ ವ್ಯಾಪ್ತಿಯ ಕಾರವಾರ- ಇಳಕಲ್ ರಾಜ್ಯ ಹೆದ್ದಾರಿಯ ಅಕ್ಕಪಕ್ಕದ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅದನ್ನು ತೆರವುಗೊಳಿಸಿ ವಿಸ್ತರಣೆ ಕಾರ್ಯ ಚುರುಕುಗೊಳಿಸುವಂತೆ ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.
  ಸಾರ್ವಜನಿಕರ ಬೇಡಿಕೆಯ ಮೇರೆಗೆ ವೇದಿಕೆಯ ಕಾರ್ಯಕರ್ತರು ಈ ಅಭಿವೃದ್ಧಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಗೆ ಮನವಿ ಸಲ್ಲಿಸಿದ್ದಾರೆ. ಇದು ನಗರದ ಪ್ರಮುಖ ರಸ್ತೆಯಾಗಿದ್ದು ರೈಲ್ವೆ ನಿಲ್ದಾಣದ ದಾರಿಯೂ ಇದೇ ಆಗಿರುವುದರಿಂದ ಪ್ರತಿ ದಿನ ದೇಶ- ವಿದೇಶದ ಹಾಗೂ ರಾಜ್ಯದ ವಿವಿಧ ಭಾಗದ ಪ್ರಯಾಣಿಕರು ಇದೇ ರಸ್ತೆ ಬಳಸುವುದರಿಂದ ರಸ್ತೆಯ ಕಾಮಗಾರಿಯ ಅಭಿವೃದ್ಧಿಯಿಂದ ನಗರದ ಸೌಂದರ್ಯ ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದೆ.
  ಕೆಲವರು ಈ ರಸ್ತೆಯ ಮೇಲೆ ಸಂಚರಿಸುವ ಎರಡು ಭಾಗದಲ್ಲಿ ಪ್ರತಿ ದಿನ ದೊಡ್ಡ ದೊಡ್ಡ ವಾಹನವನ್ನು ವರ್ಷವಿಡೀ ಇಡುವುದರಿಂದ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ. ಇಂತಹ ವಾಹನ ನಿಲ್ಲಿಸುವ ಮಾಲೀಕರಿಗೂ ಹಾಗೂ ವಾಹನದ ಮೇಲೆ ಕ್ರಮ ಕೈಗೊಳ್ಳಬೇಕು. ಈ ರಸ್ತೆಯ ಮಧ್ಯಭಾಗದಲ್ಲಿ ವಿದ್ಯುತ್ ದೀಪ ಅಳವಡಿಸಿ ನಗರದ ಸೌಂದರ್ಯ ಹೆಚ್ಚಿಸಬೇಕು. ಎತ್ತರದಿಂದ ರಸ್ತೆ ಅಗಲೀಕರಣ ಮಾಡುವ ಮೂಲಕ ಪ್ರತಿವರ್ಷ ಮಳೆ ನೀರಿನಿಂದ ರಸ್ತೆ ಜಲಾವೃತವಾಗಿ ಸಾರ್ವಜನಿಕರು, ಶಾಲಾ ಮಕ್ಕಳು, ಆಟೋ ಚಾಲಕರು ಪರದಾಡುವುದನ್ನ ತಪ್ಪಿಸಬೇಕು. ಕೈಗಾದಿಂದ ಸಾಗುವ ಭಾರೀ ಗಾತ್ರದ ವಾಹನದಿಂದ ಬಹಳಷ್ಟು ಸಮಸ್ಯೆ ಉಂಟಾಗುತ್ತಿದ್ದು, ಕೈಗಾದಿಂದ ದೊಡ್ಡ ವಾಹ£ಗಳು ಸಂಚರಿಸುವ ಸಂದರ್ಭದಲ್ಲಿ ಬಹಳ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಬಹಳಷ್ಟು ಸಮಸ್ಯೆ ಪಡುವಂತಾಗಿದೆ. ಈ ಸಮಸ್ಯೆಗೆ ಕೈಗಾದಿಂದ ಕಾರವಾರ ತನಕ ಸಂಚರಿಸುವ ರಸ್ತೆ ಚಿಕ್ಕದಾಗಿರುವುದೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೈಗಾದಿಂದ ಸಂಚರಿಸುವ ದೊಡ್ಡ ವಾಹನವನ್ನು ಮಲ್ಲಾಪುರದಿಂದ ಸದಾಶಿವಗಡ ರಸ್ತೆ ಮುಖಾಂತರ ಸಂಚರಿಸುವಂತೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
  ಮನವಿ ಸಲ್ಲಿಸುವ ವೇಳೆ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ.ಅರ್ಗೇಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೋಷನ್ ಹರಿಕಂತ್ರ, ಜಿಲ್ಲಾ ಸಂಚಾಲಕ ಗೋಪಾಲ್ ಗೌಡ, ಜಿಲ್ಲಾ ಕಾರ್ಯದರ್ಶಿ ರಾಜೇಶ್ ಹರಿಕಂತ್ರ, ತಾಲೂಕು ಅಧ್ಯಕ್ಷ ಮೋಹನ್ ಉಳ್ವೇಕರ್, ಕಾರ್ಯಾಧ್ಯಕ್ಷರಾದ ಸುದೇಶ್ ನಾಯ್ಕ್, ಸುಶಾಂತ್ ಹರಿಕಂತ್ರ, ರಮಕಾಂತ್ ನಾಯ್ಕ್, ಸೂರಜ್ ನಾಯ್ಕ್, ಸದಾನಂದ ಸೇರಿದಂತೆ ಇತರ ಕಾರ್ಯಕರ್ತರು, ಆಟೋ ಚಾಲಕರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top