Slide
Slide
Slide
previous arrow
next arrow

ಜ.2ಕ್ಕೆ ‘ತುರುಬ ಕಟ್ಟುವ ಹದನ’ ನಾಟಕ ಪ್ರದರ್ಶನ

300x250 AD

ಕುಮಟಾ: ತಾಲೂಕಿನ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾರಿಧಿ ರಂಗ ಕೇಂದ್ರ ಮತ್ತು ನಟ ಮಿತ್ರರು, ತೀರ್ಥಹಳ್ಳಿಯ ನೀನಾಸಂ ಕಲಾವಿದರಿಂದ ಜ.2ರ ರಾತ್ರಿ 8.30ಕ್ಕೆ ‘ತುರುಬ ಕಟ್ಟುವ ಹದನ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಈ ನಾಟಕ ಈಗಾಗಲೇ ರಾಜ್ಯಾದ್ಯಂತ ಹೆಸರು ಮಾಡಿದ್ದು, ರಾಜ್ಯದ ಅತ್ಯುತ್ತಮ ನಾಟಕ ಮತ್ತು ರಾಜ್ಯದ ಶ್ರೇಷ್ಠ ನಾಟಕ ಹಾಗೂ ಇತರೆ 8 ಪ್ರಶಸ್ತಿಗಳನ್ನು ಪಡೆದಿದೆ. ಈ ನಾಟಕವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ್ ಕುಮಟಾ ನೀನಾಸಂ ನಿರ್ದೇಶನ ಮಾಡಿದ್ದಾರೆ. ಶ್ರೀಪಾದ್ ತೀರ್ಥಹಳ್ಳಿ ನೀನಾಸಂ ಮತ್ತು ಶಿವಕುಮಾರ್ ತೀರ್ಥಹಳ್ಳಿ ನೀನಾಸಂ ಸಹನಿರ್ದೇಶನ ಮತ್ತು ಸಂಗೀತವನ್ನು ಸಂಯೋಜನೆ ಮಾಡಿದ್ದಾರೆ. ನೀನಾಸಂನ ನಿವೃತ್ತ ಪ್ರಾಂಶುಪಾಲ ಕೆ.ಜಿ.ಮಹಾಬಲೇಶ್ವರ ಸಂಗ್ರಹದ ಪಂಪ, ರನ್ನ, ಕುಮಾರವ್ಯಾಸ, ಪುರಂದರದಾಸರ ಮಹಾಭಾರತ ಕಾವ್ಯಾಧಾರಿತ ಕಥಾವಸ್ತುವನ್ನು ನಾಟಕಕ್ಕೆ ರೂಪಾಂತರಿಸಲಾಗಿದೆ.
ಸಮಾಜದಲ್ಲಿ ಸ್ತ್ರೀ ಮೇಲೆ ನಡೆಯುವ ದೌರ್ಜನ್ಯ, ಕೌಟುಂಬಿಕ ಕಲಹಗಳು, ಸಾಮ್ರಾಜ್ಯ ವಿಸ್ತರಣೆ, ದ್ವೇಷ ಸಾಧನೆ, ಶಕ್ತಿಯ ಪ್ರದರ್ಶನ, ಅಹಂಕಾರದಿAದ ತನ್ನ ಬಂಧು- ಬಳಗವನ್ನು ಕಳೆದುಕೊಂಡು ತೊಡೆ ಮುರಿದುಕೊಂಡು ಬೀಳುವ ದುರ್ಯೋಧನನ ಅಂತ್ಯದವರೆಗಿನ ಕತೆಯನ್ನು ಶುದ್ಧ ಹಳಗನ್ನಡದಲ್ಲಿ ಪೌರಾಣಿಕ ಕಥಾವಸ್ತುವನ್ನು ಆಧುನಿಕ ರಂಗಭೂಮಿಗೆ ತಕ್ಕಂತೆ ವಿಶೇಷ ಶೈಲೀಕೃತ ಶೈಲಿಯಲ್ಲಿ ನಾಟಕವನ್ನು ಕಟ್ಟಲಾಗಿದೆ. ಕುಮಾರವ್ಯಾಸ, ರನ್ನ, ಪಂಪ, ಪುರಂದರದಾಸರ ಸಾಹಿತ್ಯಗಳು ಶಾಲಾ- ಕಾಲೇಜುಗಳ ಪಠ್ಯದಲ್ಲಿ ಅಧ್ಯಯನಕ್ಕೆ ಇರುವುದರಿಂದ ಈ ನಾಟಕವನ್ನು ಎಲ್ಲಾ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ನೋಡಲೇಬೇಕಾದ ನಾಟಕ ಇದಾಗಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕಾಗಿ ನಿರ್ದೇಶಕ ಶ್ರೀಕಾಂತ್ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top