ಹಳಿಯಾಳ: ಶ್ರೀ ವಿಆರ್‌ಡಿಎಮ್ ಟ್ರಸ್ಟ್ನ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸದ ಅಂಗವಾಗಿ ಇತ್ತೀಚಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿದರು.
ಮೊದಲಿಗೆ ವಿಧಾನ ಪರಿಷತ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕಾರ್ಯಕಲಾಪಗಳನ್ನು ವೀಕ್ಷಿಸಿದರು ಹಾಗೂ ಸುವರ್ಣಸೌಧದಲ್ಲಿರುವ ಸರ್ಕಾರದ ವಿವಿಧ ಇಲಾಖೆಯ ಮಂತ್ರಿಗಳ ಕೊಠಡಿಗಳಿಗೆ ಭೇಟಿ ನೀಡಿ, ಹಲವಾರು ಇಲಾಖೆಯ ಮುಖ್ಯಸ್ಥರೊಂದಿಗೆ ಶೈಕ್ಷಣಿಕ ರಂಗದ ಕುರಿತು ಮಾತನಾಡಿದರು. ನಂತರ ವಿಧಾನಸೌಧದ ಕೇಂದ್ರ ಬಿಂದುವಾಗಿರುವ ವಿಧಾನಸಭೆಯಲ್ಲಿ ಸಂವಿಧಾನದ ಅಡಿಯಲ್ಲಿ ನಡೆಯುವ ಶಾಸನಬದ್ಧ ರಾಜಕೀಯ ಮಂತ್ರಿಮಂಡಲದ ಕಲಾಪಗಳನ್ನು ಮತ್ತು ಪ್ರತಿಯೊಂದು ಇಲಾಖೆಯ ಕಾರ್ಯವೈಖರಿ, ಪಕ್ಷ- ಪ್ರತಿಪಕ್ಷಗಳ ಚರ್ಚಾ ವಿಧಾನವನ್ನು ನೈಜವಾಗಿ ವೀಕ್ಷಿಸಿದರು.
ಈ ಎಲ್ಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆಯವರ ಆಪ್ತ ಸಹಾಯಕ ಕಾರ್ಯದರ್ಶಿ ನರೇಂದ್ರ ಸಹಕಾರ ಮತ್ತು ಸೂಕ್ತ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳಿಂದ ಚಳಿಗಾಲದ ಅಧಿವೇಶನ ವೀಕ್ಷಣೆ
