Slide
Slide
Slide
previous arrow
next arrow

ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ: ಪ್ರತೀಕ್ಷಾ ನಾಯ್ಕ

300x250 AD

ಹಳಿಯಾಳ: ಆರೋಗ್ಯವಂತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ದೊರೆಯುತ್ತದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ, ಕ್ರೀಡಾಕೂಟವನ್ನು ಆನಂದಿಸುತ್ತಾ ಕ್ರೀಡಾಮನೋಭಾವದಿ ಗೆಲುವಿನತ್ತ ಸಾಗಿರಿ ಎಂದು ರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಪ್ರತೀಕ್ಷಾ ಜಿ.ನಾಯ್ಕ ಕರೆ ನೀಡಿದರು.
ಶ್ರೀ ವಿಆರ್‌ಡಿಎಮ್ ಟ್ರಸ್ಟ್ನ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ನಡೆದ ಎರಡು ದಿನಗಳ ಶಾಲಾ ವಾರ್ಷಿಕ ಕ್ರೀಡಾಕೂಟದ ಗೌರವಾನ್ವಿತ ಅತಿಥಿಯಾಗಿ ಧ್ವಜಾರೋಹಣ ನೆರೆವೇರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದರು.
ಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ವಿವಿಧ ನಾಲ್ಕು ವಿದ್ಯಾರ್ಥಿ ತಂಡಗಳ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪಥಸಂಚಲನ ಮಾಡಿ, ವೇದಿಕೆ ಮೇಲಿರುವ ಎಲ್ಲ ಗಣ್ಯರಿಗೂ ಗೌರವ ವಂದನೆ ಸಲ್ಲಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಆಕರ್ಷಕವಾಗಿ ವಿವಿಧ ಮಾದರಿಯಲ್ಲಿ ಎರೋಬಿಕ್ ನೃತ್ಯವನ್ನು ಯೋಗಾಸನದ ವಿವಿಧ ಮಾದರಿಯಲ್ಲಿ ಪ್ರಸ್ತುತಪಡಿಸಿದರು.
ಶಾಲೆಯ ಪ್ರಾಶುಂಪಾಲ ಡಾ.ಸಿ.ಬಿ.ಪಾಟೀಲರವರು ಎಲ್ಲ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಆಟದಲ್ಲಿ ಶಿಸ್ತು ಮತ್ತು ಏಕಾಗ್ರತೆಯನ್ನು ಕಾಯ್ದುಕೊಂಡು ಸಹ ಆಟಗಾರರೊಂದಿಗೆ ಪರಸ್ಪರ ಗೌರವಭಾವ ಸೂಚಿಸುತ್ತಾ ಗೆಲುವಿನ ಗುರಿ ಸಾಧಿಸಿ ಎನ್ನುತ್ತಾ ಎಲ್ಲರಿಗೂ ಶುಭ ಹಾರೈಸಿದರು.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಿ.ಜಿ.ಕುರಿಯವರ, ಸವಿತಾ ವಾಲೇಕರ ಎರಡು ದಿನಗಳ ಕಾಲ ನಡೆಯುವ ವಿವಿಧ ಸ್ಪರ್ಧೆಗಳ ವಿವರ ಹಾಗೂ ಆಟಗಳ ನಿಯಮಾವಳಿಗಳನ್ನು ತಿಳಿಸಿದರು. ಕ್ರೀಡಾಕೂಟದಲ್ಲಿ ಶಾಲೆಯ ಎಲ್ಲ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕ್ರೀಡಾಕೂಟದದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿನಿ ಸೌಮ್ಯಾ ಕೌಜಲಗಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದಳು. ಸೃಷ್ಟಿ ಮಾನೆ ಪ್ರಾರ್ಥನಾ ಗೀತೆಯನ್ನು ಹಾಡಿದಳು.

300x250 AD
Share This
300x250 AD
300x250 AD
300x250 AD
Back to top