ಭಟ್ಕಳ: ವಿದ್ಯಾರ್ಥಿಗಳು ಗಳಿಸುವ ಅಂಕದೊಂದಿಗೆ ಕೌಶಲ್ಯವು ಜೊತೆಯಾದಾಗ ಬೇಡಿಕೆ ಇಮ್ಮಡಿಯಾಗುತ್ತದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಮಂಗಳೂರಿನ ಕೆನರಾ ಇಂಜೀನಿಯರಿoಗ್ ಕಾಲೇಜಿನೊಂದಿಗೆ ಮಾಡಿಕೊಂಡ ಒಡಂಬಡಿಕೆಯoತೆ ಕೌಶಲ್ಯ ಎನ್ನುವ ಕಾರ್ಯಕ್ರಮದ ಭಾಗವಾಗಿ ವೆಬ್‌ಡಿಸೈನಿಂಗ್ ಮತ್ತು ಡಿಜಿಟಲ್ ಕ್ರಿಯೇಟಿವ್ಸ್ ಎನ್ನುವ ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಭಾರತದ ಬೇಡಿಕೆಯು ಕೌಶಲ್ಯಯುತ ಮಾನವ ಸಂಪನ್ಮೂಲವಾಗಿದ್ದು, ವಿದ್ಯಾರ್ಥಿಗಳು ತರಗತಿಯಲ್ಲಿ ನಡೆಯುವ ಪಠ್ಯಗಳಿಂದ ಪಡೆಯುವ ಅಂಕಗಳ ಜೊತೆಗೆ ಇಂತಹ ಕಾರ್ಯಾಗಾರಗಳಿಂದ ದೊರೆಯುವ ಕೌಶಲ್ಯಗಳಿಂದ ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆನರಾ ಎಂಜಿನಿಯರಿoಗ್ ಕಾಲೇಜಿನ ಉಪನ್ಯಾಸಕ ಸುಜಿತ್ ಎಸ್.ಪೈ ಅವರ ನೇತೃತ್ವದಲ್ಲಿ ಬಾಲಕೃಷ್ಣ ಕಿಣಿ, ಆಶಿಷ್ ಭಂಡಾರಿ, ಪರಮಶಿವ ಕಾರಂತ್ ಮತ್ತು ಉದಿತ್ ಬೇಕಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ವೀರೇಂದ್ರ ಶಾನಭಾಗ ನಿರೂಪಿಸಿ ವಂದಿಸಿದರು. ಕಾರ್ಯಾಗಾರದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.