• Slide
  Slide
  Slide
  Slide
  previous arrow
  next arrow
 • ಪ್ರಶಸ್ತಿ ಪಡೆದು ದಾಂಡೇಲಿಗಾಗಮಿಸಿದ ದೇಶಪಾಂಡೆಗೆ ಅದ್ಧೂರಿ ಸ್ವಾಗತ

  300x250 AD

  ದಾಂಡೇಲಿ: ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದು ಶುಕ್ರವಾರ ಸಂಜೆ ದಾಂಡೇಲಿಗಾಗಮಿಸಿದ ಆರ್.ವಿ.ದೇಶಪಾಂಡೆಯವರಿಗೆ ನಗರದ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಕೆ.ಸಿ.ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿ, ಅಲ್ಲಿಂದ ಜೆ.ಎನ್.ರಸ್ತೆಯ ಮಾರ್ಗವಾಗಿ ನಗರ ಸಭೆಯವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆಯ ಕರೆದುಕೊಂಡು ಬಂದು ಗೌರವ ಸಲ್ಲಿಸಿದರು.
  ಮೆರವಣಿಗೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕರ‍್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ಮೆರವಣಿಗೆಯ ಉದ್ದಕ್ಕೂ ಆರ್.ವಿ.ದೇಶಪಾಂಡೆಯವರಿಗೆ ಜೈಕಾರವನ್ನು ಹಾಕಿ, ದೇಶಪಾಂಡೆಯವರ ಪರ ಘೋಷಣೆಗಳನ್ನು ಕೂಗಲಾಯಿತು.
  ಆನಂತರ ಪಕ್ಷದ ಮುಖಂಡರು ಮತ್ತು ಕರ‍್ಯಕರ್ತರನ್ನು ಉದ್ದೇಶಿಸಿ ತೆರೆದ ಜೀಪಿನಲ್ಲೆ ನಿಂತು ಮಾತನಾಡಿದ ಆರ್.ವಿ.ದೇಶಪಾಂಡೆಯವರು ತುಳಜಾಭವಾನಿಯ ಆಶೀರ್ವಾದ, ತಂದೆ ತಾಯಿಯವರ ಆಶೀರ್ವಾದ, ಕುಟುಂಬದ ಸದಸ್ಯರ ಸಹಕಾರ ಹಾಗೂ ವಿಶೇಷವಾಗಿ ಕ್ಷೇತ್ರದ ಮತದಾರ ಬಾಂಧವರ ಪ್ರೀತಿಯ ಸಹಕಾರದಿಂದ ಈ ಪ್ರಶಸ್ತಿ ಬಂದಿದೆ ಎಂದು ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top