ಹೊನ್ನಾವರ: ಪಟ್ಟಣದ ಪ್ರಭಾತನಗರದ ಪ್ರೌಡಶಾಲೆಯಲ್ಲಿ ಎನ್.ಎಸ್.ಎಸ್ ಘಟಕ ಹಾಗೂ ಲಯನ್ಸ ಕ್ಲಬ್ ವತಿಯಿಂದ ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ ಜರುಗಿತು.
ಖ್ಯಾತ ವೈದ್ಯರಾದ ಡಾ.ಪ್ರಮೋದ ಪಾಯ್ದೆ ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಕಾರಣ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ ನೀಡಿದರು.
ಲಯನ್ಸ್ ಅಧ್ಯಕ್ಷ ಕೆ.ಸಿ.ವರ್ಗಿಸ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಜಿ.ಕೆ.ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿದರು. ಲಯನ್ಸ್ ಕಾರ್ಯದರ್ಶಿ ರಾಜೇಶ ಸಾಲೆಹಿತ್ತಲ್, ಸದಸ್ಯರು, ಶಾಲಾ ಶಿಕ್ಷಕಿ ಆಶಾ ಪೈ, ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.