Slide
Slide
Slide
previous arrow
next arrow

ತೆರೆ ಕಾಣಲು ಸಜ್ಜಾದ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’

300x250 AD

ಯಲ್ಲಾಪುರ: ಛಾಯಾಗ್ರಾಹಕರ ಜೀವನಾಧಾರಿತ ಕಥೆ ಹೊಂದಿರುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಎಂಬ ಸಿನಿಮಾ ಜ.6ರಂದು ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿದೆ.
ಈ ಸಿನೆಮಾದ ವಿಶೇಷತೆಯೆಂದರೆ, ಉತ್ತರಕನ್ನಡ ಜಿಲ್ಲೆಯ ಭಾಷೆಯ ಸೊಗಡನ್ನು ವಿಶಿಷ್ಟವಾಗಿ ಬಳಸಿಕೊಂಡಿರುವುದು. ಹೊನ್ನಾವರ, ಕವಲಕ್ಕಿ, ಶಿರಸಿ, ಯಲ್ಲಾಪುರ, ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ, ಹಾಸಣಗಿ ಪಂಚಾಯತ ವ್ಯಾಪ್ತಿಯ ಯಡಳ್ಳಿ, ಕುರಿಕೊಪ್ಪ, ಗೋರ್ಸಗದ್ದೆ, ಹೊಂಕಣಕೆರೆ, ಮಂಚೀಕೇರಿ ಮುಂತಾದ ಸುಂದರ ರಮಣೀಯ ಸ್ಥಳಗಳಲ್ಲದೆ, ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಉಮ್ಮಚಗಿಯೂ ಸೇರಿ, ಬಾಳೆಗದ್ದೆಯಲ್ಲಿ ಸುರಿವ ಮಳೆಯಲ್ಲಿಯೆ ಬಹುಪಾಲು ಚಿತ್ರೀಕರಣ ಮಾಡಲಾಗಿದೆ.
ಇಲ್ಲಿಯ ಸ್ಥಳೀಯ ಕಲಾವಿದರಾದ ಎಂ.ಕೆ.ಭಟ್ಟ ಯಡಳ್ಳಿ, ಬಿ.ಆರ್.ನಾಯ್ಕ, ಶಾಂತಾರಾಮ ಹೆಗಡೆ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಲ್ಲಿಯವರೇ ಆದ, ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಗಾಯಕ ರವಿ ಮೂರೂರ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಭಿಷೇಕ್ ಶಿರಸಿ ಕಥೆ, ಚಿತ್ರಕಥೆ ಹೊಂದಿರುವ, ಅಜಿತ್ ಬೊಪ್ಪನಹಳ್ಳಿ ಸಂಭಾಷಣೆ ಬರೆದಿರುವ ಈ ಸಿನೆಮಾದಲ್ಲಿ ಶ್ರೀರಾಮ್ ಗಂಧರ್ವ ಅವರ ಸಂಗೀತ ಸಂಯೋಜನೆಯ, ಕಾಂತಾರ ಖ್ಯಾತಿಯ ಪ್ರಮೋದ ಮರವಂತೆ ಅವರ ಸಾಹಿತ್ಯದ ಎರಡು ಹಾಡುಗಳಿವೆ.
ಸೃಜನ್ ಪ್ರೊಡಕ್ಷನ್‌ನ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಹಣ ಹೊಂದಿಸಿದ್ದು, ಕಿರುತೆರೆಯ ನಟ, ಶಿರಸಿಯವರೇ ಆದ ರಾಜೇಶ್ ಧ್ರುವ ನಾಯಕರಾಗಿ ನಟಿಸಿ, ನಿರ್ದೇಶನ ಕೂಡ ಮಾಡಿದ್ದಾರೆ. ಮನೋಜ್ ಅವರ ಛಾಯಾಗ್ರಹಣ, ಗಣಪತಿ ಭಟ್ಟ ಸಂಕಲನ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ರವಿ ಸಾಲಿಯಾನ್, ರಾಧಿಕಾ ಅಚ್ಯುತ ರಾವ್, ಸಂಪತ್ ಜಿ. ರಾಮ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮಿ, ನಕುಲ್ ಶರ್ಮ, ರಕ್ಷಿತ್, ಕಿರುತೆರೆ ನಟ ಶಿಶಿರ್ ಮೊದಲಾದವರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top