• Slide
  Slide
  Slide
  Slide
  previous arrow
  next arrow
 • ಮೂವರು ದರೋಡೆಕೋರರ ಬಂಧನ; ತೀವ್ರ ವಿಚಾರಣೆ

  300x250 AD

  ಶಿರಸಿ: ಶಿರಸಿ-ಬನವಾಸಿ ಭಾಗಗಳಲ್ಲಿ ಆರು ಜನರಿಗೆ ಬೆದರಿಸಿ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  ಎರಡು ದಿನಗಳ ಹಿಂದೆ ಶಿರಸಿ ಸುತ್ತಮುತ್ತಲಿನ ಭಾಗಗಳಲ್ಲಿ ಬೈಕ್ ಮೇಲೆ ಬಂದು ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ದರೋಡೆಕೋರರು ಪುನಃ ಇದೇ ದುಷ್ಕೃತ್ಯಕ್ಕೆ ಕೈ ಹಾಕಿದ್ದು, ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿ, ಬಂಧಿಸಿದ್ದಾರೆ. ಸಮೀಪದ ಶಿರಸಿಮಕ್ಕಿ ಕ್ರಾಸ್ ಬಳಿ ಸುಲಿಗೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ಖದೀಮರನ್ನು, ಪೊಲೀಸರು ಬೆನ್ನಟ್ಟಿದ್ದು ಚಿಪಗಿ ಕ್ರಾಸ್ ಬಳಿ ಪೊಲೀಸರಿಗೂ ಚಾಕು ತೋರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ನಂತರ ಮುಂಡಗೋಡ ಬಳಿ ಮಳಗಿ ಪೊಲೀಸರು ಬೈಕ್ ಸಹಿತ ಮೂವರನ್ನು ಬಂಧಿಸಿದ್ದಾರೆ.

  300x250 AD

  ಶಿರಸಿ ಡಿವೈಎಸ್ಪಿ ಕೆ.ಎಲ್.ಗಣೇಶ್ ನೇತೃತ್ವದಲ್ಲಿ ಶಿರಸಿ,ಮುಂಡಗೋಡ ಪೋಲೀಸರ ಮಹತ್ವದ ಕಾರ್ಯಾಚರಣೆಯ ಪ್ರತಿಫಲವಾಗಿ ದರೋಡೆಕೋರರ ಬಂಧನ ಯಶಸ್ವಿಯಾಗಿದ್ದು,ತೀವ್ರ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.

  Share This
  300x250 AD
  300x250 AD
  300x250 AD
  Back to top