• Slide
    Slide
    Slide
    previous arrow
    next arrow
  • ನಿವೃತ್ತ ಪ್ರಾಧ್ಯಾಪಕ ಪಿ.ಟಿ.ಥಾಮಸ್ ನಿಧನ

    300x250 AD

    ಅಂಕೋಲಾ: ಇಲ್ಲಿಯ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಸುದೀರ್ಘ ಕಾಲ ಮನಶಾಸ್ತ್ರ ಹಾಗೂ ತರ್ಕಶಾಸ್ತ್ರ ವಿಷಯದ ಪ್ರಾಧ್ಯಾಪಕರಾಗಿದ್ದ ಪ್ರೊ.ಪಿ.ಟಿ.ಥಾಮಸ್ (91) ವಯೋಸಹಜ ಅನಾರೋಗ್ಯದಿಂದ ಕೇರಳದಲ್ಲಿ ನಿಧನರಾದರು.
    ಮಲೆಯಾಳಂ ಮಾತೃ ಭಾಷೆಯವರಾದ ಅವರು ಕನ್ನಡವನ್ನು ಬಹಳ ಆಸಕ್ತಿಯಿಂದ ಕಲಿತು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಪಾಠ ಮಾಡುತ್ತಿದ್ದರು. ಸಹನೆ ಹಾಗೂ ಸೌಮ್ಯ ಗುಣ ಹೊಂದಿದ್ದ ಪ್ರೊ. ಥಾಮಸ್ ಕೆಲ ಕಾಲ ಶಿರಸಿಯ ಕಾಲೇಜಿನಲ್ಲೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಅವರ ಪತ್ನಿ ಶಾಂತಿ ಥಾಮಸ್ ಅವರೂ ಸಹ ಜಿ.ಸಿ. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
    ನಿವೃತ್ತಿಯ ನಂತರ ಸ್ಥಳೀಯ ಸಿ.ಎಂ.ಎ. ಆಸ್ಪತ್ರೆಯ ಆಡಳಿತಾಧಿಕಾರಿಯಾಗಿಯೂ ಕೆಲ ಕಾಲ ಸೇವೆ ಸಲ್ಲಿಸಿದ್ದ ಪ್ರೊ. ಥಾಮಸ್ ಅವರು ಅಂಕೋಲೆಯ ಶೈಕ್ಷಣಿಕ ವಲಯದಲ್ಲಿ ಸುಪರಿಚಿತರಾಗಿದ್ದರು. ಅವರ ನಿಧನಕ್ಕೆ ಕ್ರಿಸ್ತ ಮಿತ್ರ ಆಶ್ರಮದ ಸದಸ್ಯರು ಹಾಗೂ ಊರಿನ ಗಣ್ಯರು ಕಂಬನಿ ಮಿಡಿದಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top