ಯಲ್ಲಾಪುರ: ಕಳಚೆ ಪ್ರೀಮಿಯರ್ ಲೀಗ್- 3 ಉತ್ತರ ಕನ್ನಡ ಜಿಲ್ಲಾ ಮಟ್ಟದ ಹವ್ಯಕ ಕ್ರಿಕೆಟ್ ಪಂದ್ಯಾವಳಿ ಡಿ.31 ಮತ್ತು 2023ರ ಜ.1ರಂದು ಕಳಚೆ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.
ಡಿ.31ರಂದು ಬೆಳಿಗ್ಗೆ 11 ಗಂಟೆಗೆ ಕೆಪಿಎಲ್- 3 ಪಂದ್ಯಾವಳಿಯನ್ನು ವಜ್ರಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ ಗಾಂವ್ಕರ್ ಉದ್ಘಾಟಿಸಲಿದ್ದಾರೆ. ಸರ್ಕಾರಿ ಪ್ರೌಢಶಾಲೆ, ಕಳಚೆ ಮುಖ್ಯೋಪಾಧ್ಯಾಯ ಉದಯ ನಾಯ್ಕ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶ್ರುತಿ ಹೆಗಡೆ, ಕಾರ್ಯದರ್ಶಿಗಳು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನರಸಿಂಹ ಸಾತೊಡ್ಡಿ, ಸಿವಿಲ್ ಎಂಜಿನಿಯರ್ ಕೇಶವ ಪಟಗಾರ, ಅಡಿಕೆ ವ್ಯಾಪಾರಸ್ಥ ನರಸಿಂಹಮೂರ್ತಿ ಭಟ್ಟ ಕೋಣೆಮನೆ, ಉದ್ಯಮಿ ಶಿವರಾಮ ಭಟ್ಟ ದೇವಸ, ಸಹ್ಯಾದ್ರಿ ಸೇವಾ ಸಹಕಾರಿ ಸಂಘ ಕಳಚೆ ಪ್ರಭಾರಿ ಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ ಉಪಸ್ಥಿತರಿರುವರು.
ಜ.1ರಂದು ಸಂಜೆ 4ರಿಂದ ನೂತನ ಕ್ರೀಡಾಂಗಣದ ಉದ್ಘಾಟನೆ ಸಮಾರೋಪ ಸಮಾರಂಭ ಹಾಗೂ ಯುವ ಮುಖಂಡರು ಹಾಗೂ ಉದ್ಯಮಿ ವಿವೇಕ ಹೆಬ್ಬಾರ ಉಪಸ್ಥಿತಿಯಲ್ಲಿ ಬಹುಮಾನ ವಿತರಣೆ, ಸಹ್ಯಾದ್ರಿ ಸೇವಾ ಸಹಕಾರಿ ಸಂಘ ನಿ., ಕಳಚೆ ಅಧ್ಯಕ್ಷ ಉಮೇಶ ಭಾಗ್ವತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ, ಯುವ ಮುಖಂಡರು, ಮತ್ತು ಉದ್ಯಮಿ ಶ್ರೀನಿವಾಸ ಭಟ್ಟ ಧಾತ್ರಿ, ಉದ್ಯಮಿ ಎಂ.ಎನ್.ದುAಡಸಿ ಮುಂಡಗೋಡ, ಉಪವಿಭಾಗೀಯ ಅರಣ್ಯಾಧಿಕಾರಿ ಎಸ್.ಜಿ.ಹೆಗಡೆ, ಗಜಾನನ ಭಟ್ಟ, ಸದಸ್ಯರು, ಗ್ರಾಮ ಪಂಚಾಯತ, ವಜ್ರಳ್ಳಿ ಗೋಪಾಲ ವಿ.ಭಟ್ಟ ಉಪಾಧ್ಯ, ಕನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ, ವಕೀಲರಾದ ಜಿ. ಆರ್. ಹೆಗಡೆ ಕಳಚೆ ಮುಖ್ಯ ಅತಿಥಿಗಳಾಗಿ ಕೆ.ಪಿ.ಎಲ್. ಆಡಳಿತ ಮಂಡಳಿ ಸಿ.ಎ.ಜನಾರ್ಧನ ಹೆಬ್ಬಾರ್, ಪ್ರಕಾಶ ಹೆಗಡೆ, ಪ್ರಮೋದ ಹೆಬ್ಬಾರ್, ಅನಂತ ಹೆಗಡೆ, ಸತೀಶ ಹೆಗಡೆ, ವಿಶ್ವೇಶ್ವರ ಭಟ್ಟ, ನಾರಾಯಣ ಭಾಗ್ವತ್, ಶಿವಪ್ರಸಾದ ಭಟ್ಟ ತಿಳಿಸಿದ್ದಾರೆ.