ಅಂಕೋಲಾ: ಶ್ರೀವಿಠ್ಠಲ ಯುವಕ ಸಂಘದ ಆಶ್ರಯದಲ್ಲಿ ಜಿಎಸ್‌ಬಿ ಸಮಾಜ ದಿವಸ್ ಪ್ರತಿಭಾವಂತ ಮಕ್ಕಳಿಗೆ ಗೌರವ, ವಿವಿಧ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳ ಮೂಲಕ ಸಂಭ್ರಮದಿoದ ಜರುಗಿತು.
ಮಠಾಕೇರಿಯ ಶ್ರೀವೀರವಿಠ್ಠಲ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಸುಬ್ಬಾರಾವ್ ಎಸ್.ಪೈ ಉದ್ಘಾಟಿಸಿ ಮಾತನಾಡಿ, ಸಮಾಜ ಬಾಂಧವರಲ್ಲಿ ಪರಸ್ಪರ ಸಹಕಾರ, ಏಕತೆ ಮತ್ತು ಪ್ರತಿಭೆಗಳಿಗೆ ಪುರಸ್ಕಾರ ಒದಗಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಠ ಕಮಿಟಿಯ ಅಧ್ಯಕ್ಷ ಪುಂಡಲೀಕ ಪಿ.ಪ್ರಭು ವಹಿಸಿದ್ದರು. ಕಾರ್ಯದರ್ಶಿ ಮಾರುತಿ ಕೆ.ನಾಯಕ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ಅತಿಥಿ ಸುಬ್ಬಾರಾವ್ ಪೈ ಅವರನ್ನು ಸನ್ಮಾನಿಸಲಾಯಿತು.
ಶ್ರೇಯಾ ನಾಯಕ ಪ್ರಾರ್ಥಿಸಿದರು. ಶ್ರೀವಿಠ್ಠಲ ಯುವಕ ಸಂಘದ ಅಧ್ಯಕ್ಷ ವೆಂಕಟೇಶ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಸಂಜೀವ ವಿ.ಪ್ರಭು ವರದಿ ಓದಿದರು. ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ಯಾದಿಯನ್ನು ಪುರುಷೋತ್ತಮ ನಾಯಕ, ಸಹನಾ ತೇಲಂಗ, ಅಶ್ವಿನಿ ಕಾಮತ್, ವಿನೋದ ಶಾನಭಾಗ ಓದಿದರು. ಅಮೋಲ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಉದಯ ಶೇಣ್ವಿ ವಂದಿಸಿದರು. ಕೇಶವ ನಾಯಕ- ರಾಧಾ ದಂಪತಿ ಮನರಂಜನಾ ಕಾರ್ಯಕ್ರಮ ನಿರ್ವಹಿಸಿದರು.