• Slide
    Slide
    Slide
    previous arrow
    next arrow
  • ಹೆಗಡೆಯಲ್ಲಿ ಹಿರಿಯ ನಾಮಧಾರಿಗಳಿಗೆ ಗೌರವಾರ್ಪಣೆ

    300x250 AD

    ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ನಾಮಧಾರಿ ಸಮಾಜದ 90 ವರ್ಷ ಮೇಲ್ಪಟ್ಟ ಇಬ್ಬರು ಹಿರಿಯರನ್ನು ರಾಜ್ಯ ನಾಮಧಾರಿ ಸಂಘದ ಅಧ್ಯಕ್ಷ ಬಿ.ವಿ.ನಾಯ್ಕ ಆದೇಶದ ಮೇರೆಗೆ ಸಂಘದ ರಾಜ್ಯ ಸದಸ್ಯರು ಹಾಗೂ ಸ್ಥಳೀಯ ಅಧ್ಯಕ್ಷರು ಹೆಗಡೆಯ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.
    ನಾಮಧಾರಿ ಸಂಘದ ರಾಜ್ಯ ಸದಸ್ಯ ಸುಕ್ರು ನಾಯ್ಕ ನೇತೃತ್ವದಲ್ಲಿ ರಾಜ್ಯ ನಾಮಧಾರಿ ಸಂಘದ ಮಾಜಿ ಅಧ್ಯಕ್ಷ ರೋಹಿದಾಸ್ ನಾಯ್ಕ ಹಾಗೂ ಹೆಗಡೆ ಗ್ರಾಮದ ನಾಮಧಾರಿ ಸಮಾಜದ ಅಧ್ಯಕ್ಷ ಎನ್.ವಿ.ನಾಯ್ಕ ಇವರು ತಾಲೂಕಿನ ಹೆಗಡೆ ಗ್ರಾಮದ ಹೊನ್ನನಮನೆ ಕುಟುಂಬದ 94 ವರ್ಷದ ಹನುಮಂತ ನಾರಾಯಣ ನಾಯ್ಕ ಹಾಗೂ ಇವರ ಪತ್ನಿ, ಮಕ್ಕಳು ಅಳಿಯಂದಿರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅದರಂತೆ ಇನ್ನೊರ್ವರಾದ ಹೆಗಡೆ ಗ್ರಾಮದ ಬೂರಿಮನೆ ಕುಟುಂಬದ 95 ವರ್ಷ ಲಕ್ಷ್ಮಿನಾರಾಯಣ ನಾಯ್ಕ ಇವರನ್ನು ಇವರ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಈ ಸಂದರ್ಭದಲ್ಲಿ ಸುಕ್ರು ನಾಯ್ಕ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜದ 90 ವರ್ಷ ಮೇಲ್ಪಟ್ಟ ಇನ್ನೂ ಅನೇಕರ ಹೆಸರನ್ನು ರಾಜ್ಯ ಸಂಘಕ್ಕೆ ಕಳುಹಿಸಿ ಸನ್ಮಾನಿಸಿ ಗೌರವಿಸಲಾಗುವುದು. ಈ ಹಿರಿಯರೆಲ್ಲರೂ ಸಮಾಜಕ್ಕೆ ನೀಡಿದ ಕೊಡುಗೆ ಮಾರ್ಗದರ್ಶನ ಅಪಾರ. ಅವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.
    ನ್ಯಾಯವಾದಿ ಜಯಂತ ನಾಯ್ಕ ಬೊಗರಿಬೈಲ್, ಹೆಗಡೆ ಗ್ರಾಪಂ ಉಪಾಧ್ಯಕ್ಷ ಶಾಂತಾರಾಮ ನಾಯ್ಕ, ಉಮೇಶ ನಾಯ್ಕ, ನಾಗರಾಜ ನಾಯ್ಕ ಹಾಗೂ ಸಮಾಜದ ಇತರ ಪ್ರಮುಖರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top