• Slide
    Slide
    Slide
    previous arrow
    next arrow
  • ಪಶ್ಚಿಮಘಟ್ಟದ ಉತ್ಪನ್ನಗಳ ತಾಣ ‘ಟ್ರೈಬಲ್ ಇಕೋ ಶಾಪ್’

    300x250 AD

    ದಾಂಡೇಲಿ: ನಗರದ ಜೆ.ಎನ್.ರಸ್ತೆಯಲ್ಲಿರುವ ಯುನೈಟೆಡ್ ಕಟ್ಟಡದಲ್ಲಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸಿಗುವ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆಯಾಗಿರುವ ‘ಟ್ರೈಬಲ್ ಇಕೋ ಶಾಪ್’ ಶುಭಾರಂಭಗೊoಡಿದೆ.
    ಜಗತ್ತಿನ ಅತ್ಯಂತ ಸರ್ವಶ್ರೇಷ್ಟವಾದ ಗಿಡಮೂಲಿಕೆ ಹಾಗೂ ವನ್ಯಸಂಪತ್ತನ್ನು ಹೊಂದಿರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಪರ್ವತ ಶ್ರೇಣಿಯಲ್ಲಿ ಸಿಗುವಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಆರೋಗ್ಯವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯೆ ಟ್ರೈಬಲ್ ಇಕೋ ಶಾಪ್. ಒಂದೇ ಸೂರಿನಲ್ಲಿ ಆರೋಗ್ಯ ಸಂರಕ್ಷಣೆಗೆ ಮತ್ತು ಆರೋಗ್ಯವರ್ಧಕ ಆಹಾರ ವಸ್ತುಗಳು ಲಭ್ಯವಿದೆ. ಕಾಡಿನೊಳಗಿನ ವಸ್ತುಗಳಿಂದಲೆ ತಯಾರಿಸಿದ ವಿಶಿಷ್ಟ ಮತ್ತು ಬಗೆ ಬಗೆಯ ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುವ ಔಷಧಿಗಳು ಮತ್ತು ಆರೋಗ್ಯಕ್ಕೆ ಹಿತವಾದ ಆಹಾರ ವಸ್ತುಗಳು ಇಲ್ಲಿ ಮಾರಾಟಕ್ಕೆ ಲಭ್ಯವಿದೆ.
    ಬಿಪಿ, ಶುಗರ್, ಸೊಂಟ ನೋವು, ಕೀಲು ನೋವು, ಸಂಧಿವಾತ, ಅಲರ್ಜಿ, ನಿತ್ರಾಣ, ಪಿತ್ತ, ಬೆನ್ನು ನೋವು, ತಲೆ ನೋವು ಎಂದು ಬಹುತೇಕರನ್ನು ಪೀಡಿಸುವ ಕಾಯಿಲೆಗಳನ್ನು ಉಪಶಮನಗೊಳಿಸಲು ಪರಿಣಾಮಕಾರಿ ಮತ್ತು ಅತೀ ವೇಗದಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಸಾಮಾರ್ಥ್ಯವನ್ನು ಹೊಂದಿರುವ ನಮ್ಮ ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವಿನ ವಿವಿಧ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳು, ಕಷಾಯಗಳು, ಕಷಾಯ ಪುಡಿ ಹೀಗೆ ಇನ್ನೂ ಅನೇಕ ಆರೋಗ್ಯವರ್ಧನೆಯ ಔಷಧಿಗಳ ಆಲಯವೆ ಈ ನಿಮ್ಮ ಟ್ರೈಬಲ್ ಇಕೋ ಶಾಪ್. ಇನ್ನೂ ಸವಿದಷ್ಟು ಮತ್ತೆ ಸವಿಯಬೇಕೆನ್ನುವ ಆಹಾರ ವಸ್ತುಗಳು, ವಿವಿಧ ಮಸಾಲೆ ಪೌಡರ‍್ಸ್ ಗಳು ಹೀಗೆ ಇನ್ನೂ ಅನೇಕ ಉತ್ಪನ್ನಗಳು ಇಲ್ಲಿವೆ. ಇನ್ನೂ ಬಹುಬೇಡಿಕೆಯ ಪಶ್ಚಿಮಘಟ್ಟದಲ್ಲಿ ಸಿಗುವ ಪರಿಶುದ್ಧ ಜೇನು ತುಪ್ಪವು ಇಲ್ಲಿ ಮಾರಾಟಕ್ಕೆ ಲಭ್ಯವಿದೆ.ಇಲ್ಲಿ 30 ಕ್ಕೂ ಅಧಿಕ ವಿವಿಧ ಆರೋಗ್ಯರಕ್ಷಕ ಔಷಧಿಗಳು, ಅಡುಗೆ ತಯಾರಿಕೆಗೆ ಬಳಸುವ 12 ಕ್ಕೂ ಅಧಿಕ ಪೌಡರ‍್ಸ್ ಗಳು, 7-8 ವಿವಿಧ ಬಗೆಯ ಉಪ್ಪಿನ ಕಾಯಿಗಳು, 15 ಕ್ಕೂ ಅಧಿಕ ಸೌಂದರ‍್ಯವರ್ಧಕ ಉತ್ಪನ್ನಗಳು, 10 ಕ್ಕೂ ಅಧಿಕ ಆರೋಗ್ಯ ವರ್ಧಕ ಪಾನೀಯ ಉತ್ಪನ್ನಗಳು ಹೀಗೆ ಇನ್ನೂ ಅನೇಕ ಬಗೆ ಬಗೆಯ ಉತ್ಪನ್ನಗಳು ಇಲ್ಲಿ ಮಾರಾಟಕ್ಕೆ ಲಭ್ಯವಿದೆ.
    ಇಲ್ಲಿ ಗುಣಮಟ್ಟದ ಉತ್ಪನ್ನಗಳನ್ನಷ್ಟೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೆ ಟ್ರೈಬಲ್ ಇಕೋ ಶಾಪ್ ಜೋಯಿಡಾ, ಗಣೇಶಗುಡಿ ಮೊದಲಾದ ಕಡೆ ಇದ್ದು, ಇಲ್ಲಿಂದ ರಾಜ್ಯ, ಹೊರ ರಾಜ್ಯ ಹಾಗೂ ದೇಶ, ವಿದೇಶಗಳಿಗೂ ಅನೇಕ ವಸ್ತುಗಳು ಮಾರಾಟವಾಗುತ್ತಿರುವುದು ಇಲ್ಲಿಯ ಉತ್ಪನ್ನಗಳ ಗುಣಮಟ್ಟವನ್ನು ಸಾದರಪಡಿಸುತ್ತದೆ. ಗ್ರಾಹಕರ ನಂಬಿಕೆಗೆ ಅನುಗುಣವಾಗಿ, ಗ್ರಾಹಕರಿಗೆ ನೂರಕ್ಕೆ ನೂರು ತೃಪ್ತಿ ಮತ್ತು ಆರೋಗ್ಯ ಸಂತೃಪ್ತಿಯನ್ನು ನೀಡುವ ಉತ್ಪನ್ನಗಳ ಟ್ರೈಬಲ್ ಇಕೋ ಶಾಪ್‌ನ ಮತ್ತೊಂದು ವಿಶೇಷತೆ. ಅದು ಇದು ಎಂದು ನೂರೆಂಟು ಔಷಧಿ ಕೊಂಡು ಕೊಂಡು ಮತ್ತಷ್ಟು ಆರೋಗ್ಯ ಹಾಳು ಮಾಡಿಕೊಳ್ಳುವುದರ ಬದಲು, ಟ್ರೈಬಲ್ ಇಕೋ ಶಾಪಿಗೆ ಒಮ್ಮೆ ಭೇಟಿ ಕೊಟ್ಟರೆ ಸಮಸ್ಯೆಗೆ ಪರಿಹಾರವಂತು ಕಟ್ಟಿಟ್ಟ ಬುತ್ತಿ ಎನ್ನಲು ಅಡ್ಡಿಯಿಲ್ಲ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top