ಅಂಕೋಲಾ: ಗೋಮಾಂತಕ ಸಮಾಜ ಅಭಿವೃದ್ಧಿ ಸಂಘ ಮತ್ತು ಗೋಮಾಂತಕ ಸಮಾಜ ಯುವಕ ಸಂಘದ ಆಶ್ರಯದಲ್ಲಿ ಸಮಾಜದ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಆಯೋಜಿಸಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಸ್ಪರ್ಧೆಯಲ್ಲಿ ಅಮೋಘ ನಾಗ್ವೇಕರ ಮತ್ತು ಪಂಚಮ್ ನಾಗ್ವೇಕರ ಜೋಡಿ ಚಾಂಪಿಯನ್ ಹಾಗೂ ತನ್ಮಯ ಅಜದೀಪಕರ್ ಮತ್ತು ಚಿನ್ಮಯ ಅಜದೀಪಕರ್ ಅವರು ರನ್ನರ್ ಅಪ್ ಪ್ರಶಸ್ತಿ ಪಡೆದರು.
ಒಟ್ಟು 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಶಿಕ್ಷಕ ಪ್ರಶಾಂತ ನಾರ್ವೇಕರ ಮತ್ತು ಗಣೇಶ ನಾಗ್ವೇಕರ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಕ್ರೀಡಾಪಟು ಶೇಖರ ನಾಗ್ವೇಕರ ಉದ್ಘಾಟಿಸಿದರು. ಸಮಾಜದ ಹಿರಿಯ ವಸಂತ ಕದಂ, ವಿಜಯ ಹನುಮಟ್ಟೇಕರ್, ಗೋಮಾಂತಕ ಯುವಕ ಸಂಘದ ಅಧ್ಯಕ್ಷ ನವೀನ ನಾರ್ವೇಕರ್, ಉಪಾಧ್ಯಕ್ಷ ಸುಮೀತ ಅಂಕೋಲೆಕರ್ ಉಪಸ್ಥಿತರಿದ್ದರು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಉಪಾಧ್ಯಕ್ಷ ದಿನಕರ ಅಂಕೋಲೆಕರ್, ಕಾರ್ಯದರ್ಶಿ ನಾಗೇಂದ್ರ ಬಾನಾವಳಿ,ಸದಸ್ಯ ಶ್ರೀಧರ ಮುರ್ಡೇಶ್ವರ, ಅನೀಲ ಬಾನಾವಳಿ ಪಾಲ್ಗೊಂಡು ವಿಜೇತರಿಗೆ ಶುಭ ಕೋರಿದರು. ಜನವರಿ 1ರಂದು ಮಧ್ಯಾಹ್ನ 3ರಿಂದ ತಾಲೂಕಿನ ಮಹಾಮಾಯಾ ದೇವಾಲಯದ ಆವರಣದಲ್ಲಿ ಗೋಮಾಂತಕ ಸಮಾಜದ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಚುಕ್ಕಿ ರಂಗೋಲಿ ಸ್ಪರ್ಧೆ, ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ, ಮತ್ತು ಮುಕ್ತ ವಿಭಾಗದ ಕೇರಂ ಡಬಲ್ಸ್ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.