ಅಂಕೋಲಾ: ಬೆಳೆಗಾರರ ಸಮಿತಿ ಅಂಕೋಲಾ ಇವರು ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮುಂದುವರೆಸಿಕೊoಡು ಬಂದಿದ್ದು, ಶೆಟಗೇರಿ ಪಂಚಾಯತದ ಕಣಗಿಲ ಗ್ರಾಮದಲ್ಲಿ ಆ ಊರಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಕರೆದು ಗ್ರಾಮದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು.
ಮುಖ್ಯ ವಕ್ತರರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಚಾರ್ಯ ಮೋಹನ ಹಬ್ಬು ಮಾತನಾಡಿ, ಚೌಕದಹಳ್ಳಿ ಗ್ರಾಮದ ವಿಶೇಷದ ಬಗ್ಗೆ ಗಾಂಧೀಜಿಯವರು ಕರೆಕೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಈ ಗ್ರಾಮದ ಸೇನಾನಿಗಳ ತ್ಯಾಗ ಸೇವೆಯ ಬಗ್ಗೆ ತಿಳಿಸಿದರು. ನಮ್ಮ ಪೂರ್ವಜರು ತಂದುಕೊಟ್ಟ ಸ್ವಾತಂತ್ರ್ಯದಿoದ ದೇಶ ಇಂದು ನೆಮ್ಮದಿಯಿಂದ ಇದೆ. ಇಂದಿನ ಪೀಳಿಗೆಯವರು ಇದನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು. ಈ ಊರಿನ ಕಾಣೆ ಬೊಮ್ಮಕ್ಕ ಧೀರ ಮಹಿಳೆಯಾಗಿ ‘ಗೋ ಬ್ಯಾಕ್ ಗವರ್ನರ್’ ಎಂಬ ಚಳವಳಿಯಲ್ಲಿ ಭಾಗವಹಿಸಿ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ ಮಹಿಳೆ. ಅಂತಹ ಅನೇಕ ಮಹಿಳೆಯರು, ಮಹನಿಯರು ಧೈರ್ಯದಿಂದ ಹೋರಾಡಿ ಸ್ವಾತಂತ್ರ್ಯ ಚಳುವಳಿಯನ್ನು ಯಶಸ್ವಿಗೊಳಿಸಿದರು. ಅನೇಕರು ಸೆರೆಮನೆವಾಸ ಅನುಭವಿಸಿ ತ್ಯಾಗಿಗಳಾಗಿದ್ದರು ಎಂದರು.
ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷ ಹನುಮಂತ ಗೌಡ ಬೆಳಂಬಾರ ಮಾತನಾಡಿ, ಅಂದಿನ ಹೋರಾಟಗಾರರು ಶಿಕ್ಷಣ ವಂಚಿತರಾಗಿದ್ದರು. ಬುದ್ಧಿವಂತಿಕೆಯಿoದ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡ ಬಗ್ಗೆ ವಿವರಿಸಿದರು.
ವಕೀಲ ಉಮೇಶ ನಾಯ್ಕ ಮಾತನಾಡಿ, ಬೆಳೆಗಾರರ ಸಮಿತಿ ಅಧ್ಯಕ್ಷರಾದ ಜಿಲ್ಲೆಯ ಖ್ಯಾತ ನ್ಯಾಯವಾದಿಗಳು ನಾಗರಾಜ ನಾಯಕರವರು ಬೆಳೆಗಾರರ ಸಮಿತಿಯಂತಹ ಸಂಘಟನೆಯನ್ನು ಹುಟ್ಟು ಹಾಕಿ ಪ್ರತಿ ಗ್ರಾಮಗಳಿಗೆ ಹೋಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ ಮಾತನಾಡಿ, ಈ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ನೆನಪು ಶಾಶ್ವತಗೊಳಿಸುವಂತಹ ಕಾರ್ಯವಾಗಬೇಕು. ಶೆಟಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅತಿಹೆಚ್ಚು ಹೋರಾಟಗಾರರು ತೊಡಗಿಸಿಕೊಂಡ ಬಗ್ಗೆ ಗಮನ ಸೆಳೆದರು.
ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕುಂಟಗಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಸದಸ್ಯರಾದ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಮದ ಪ್ರಮುಖರಾದ ಸದಾನಂದ ನಾಯಕ, ಗ್ರಾ.ಪಂ. ಸದಸ್ಯರಾದ ಮಂಜುನಾಥ ನಾಯಕ, ಬೆಳೆಗಾರರ ಸಮಿತಿಯ ಮಾದೇವ ಗೌಡ ಬೆಳಂಬಾರ, ಗೌರವಾಧ್ಯಕ್ಷರಾದ ದೇವರಾಯ ನಾಯಕ ಬೋಳೆ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಹೋರಾಟಗಾರರಾದ ಲಕ್ಷ್ಮಣ ಬೊಮ್ಮಣ್ಣ ನಾಯಕ, ಲಕ್ಷ್ಮಣ ವೆಂಕಣ್ಣ ನಾಯಕ, ಬೊಮ್ಮಯ್ಯ ತಿಮ್ಮಣ್ಣ ನಾಯಕ, ಗಿರಿಯಣ್ಣ ಬೊಮ್ಮಯ್ಯ ನಾಯಕ, ರಾಮಕೃಷ್ಣ ವೆಂಕಣ್ಣ ನಾಯಕ, ನಾರಾಯಣ ರಾಮಾ ನಾಯಕ, ವೆಂಕಣ್ಣ ಹಮ್ಮಣ್ಣ ನಾಯಕ, ಮಾಣೇಶ್ವರ ಹಮ್ಮಣ್ಣ ನಾಯಕ, ವಿಠೋಬ ಬೀರಣ್ಣ ನಾಯಕ, ಹಮ್ಮಣ್ಣ ಬೊಮ್ಮಯ್ಯ ನಾಯಕ, ನಾರಾಯಣ ಬೀರಣ್ಣ ನಾಯಕ, ಶ್ರೀಮತಿ ಬೊಮ್ಮ ಬೊಮ್ಮಯ್ಯ ಕಾಣೆ, ವೆಂಕಟರಮಣ ಬೊಮ್ಮಯ್ಯ ನಾಯಕ, ಪರಮೆಶ್ವರ ಬೀರಣ್ಣ ನಾಯಕ ಇವರ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು.
ಬೆಳೆಗಾರರ ಸಮಿತಿಯ ಪ್ರಮುಖರಾದ ಬಿಂದೇಶ ಹಿಚ್ಕಡ, ರಾಮಾ ನಾಯಕ, ಶಂಕರ ಗೌಡ, ಗೋಪು ಅಡ್ಲೂರು, ಧೀರಜ ಬಾನಾವಳಿಕರ, ಕೆ.ಕೆ ಪ್ರಸಾದ, ಸಂಜೀವ ಗುನಗಾ, ವಿನಾಯಕ ನಾಯಕ ಮೊಗಟಾ, ಗ್ರಾಮದ ಪ್ರಮುಖರಾದ ಶಶಿಧರ ನಾಯಕ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಲವಾರು ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.