Slide
Slide
Slide
previous arrow
next arrow

ಹೆಗಡೆಯಲ್ಲಿ ಗಮನ ಸೆಳೆದ ಗಣಿತ ದಿನಾಚರಣೆ, ಮಕ್ಕಳ ಸಂತೆ

300x250 AD

ಕುಮಟಾ: ತಾಲೂಕಿನ ಹೆಗಡೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ ಗಮನ ಸೆಳೆಯಿತು.
ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಹೆಗಡೆ ಕ್ಲಸ್ಟರ್ ಸಿಆರ್‌ಪಿ ಎನ್.ಆರ್.ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವ್ಯವಹಾರಿಕ ಜ್ಞಾನ ಮತ್ತು ಕಲಿಕೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಿತ್ಯ ಜೀವನದಲ್ಲಿ ಅನುಭವಿಸುವ ತೊಂದರೆಗಳಿಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ಮೂಡಿಸುದೇ ಪರಿಹಾರ. ಮಕ್ಕಳು ಸಮಾಜದಲ್ಲಿ ಭವಿಷ್ಯವನ್ನು ಧೈರ್ಯದಿಂದ ಎದುರಿಸಲು ಮಕ್ಕಳ ಸಂತೆ ಪೂರಕವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕಿ ಮಂಗಲ ಹೆಬ್ಬಾರ್ ಅವರು, ಗಣಿತಕ್ಕೆ ಭಾರತೀಯರ ಕೊಡುಗೆ ಬಹಳ ದೊಡ್ಡದಿದೆ. ಶ್ರೀನಿವಾಸ್ ರಾಮಾನುಜಂ ಅವರು ಗಣಿತ ಕ್ಷೇತ್ರದಲ್ಲಿ ತೋರಿದ ಅಗಾಧ ಜ್ಞಾನ ಅವರ ಹುಟ್ಟುಹಬ್ಬವನ್ನು ಗಣಿತ ದಿನಾಚರಣೆಯನ್ನಾಗಿ ಆಚರಿಸಲು ಪ್ರೇರಕವಾಗಿದೆ. ಮಕ್ಕಳಲ್ಲಿ ಸ್ವಾವಲಂಭಿತನ ಬರಬೇಕಾದರೆ ಅದು ಕೇವಲ ಅಂಕ ಗಳಿಕೆಯಿಂದ ಮಾತ್ರ ಸಾಧ್ಯವಾಗದು. ವ್ಯವಹಾರಿಕ ದೃಷ್ಟಿಯಿಂದ ಪರಿಣಿತನಾದಾಗ ಮಾತ್ರ ಮಕ್ಕಳು ಭವಿಷ್ಯವನ್ನು ಸುಲಭವಾಗಿ ಎದುರಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ಮಾತನಾಡಿ, ಬಹುತೇಕ ಮಕ್ಕಳು ಕೇವಲ ತಮ್ಮ ಜ್ಞಾನ ಅಂಕ ಗಳಿಕೆಗೆ ಸೀಮಿತಗೊಳಿಸಿಕೊಂಡಿದ್ದಾರೆ. ಅಂಕ ಅದು ಕಲಿಕೆಯ ಒಂದು ಮಾನದಂಡ ಅಷ್ಟೇ. ಪೂರಕವಾಗಿ ಮಕ್ಕಳು ಮನೆಯಲ್ಲಿ ತಮ್ಮ ಪಾಲಕರೊಂದಿಗೆ ಸಮಾಜದಲ್ಲಿ ಹಿರಿ-ಕಿರಿಯರೊಂದಿಗೆ ಮಾರುಕಟ್ಟೆಯಲ್ಲಿ ವ್ಯವಹರಿಸುವ ರೀತಿ ನೀತಿಗಳು ಬಾಲ್ಯದಲ್ಲಿಯೇ ಕರಗತವಾದರೆ ಅದು ತುಂಬಾ ಅನುಕೂಲವಾಗುತ್ತದೆ ಇದಕ್ಕೆ ನಮ್ಮ ಶಾಲೆಯಲ್ಲಿ ಇಂದು ಆಯೋಜಿಸಿರುವ ಮಕ್ಕಳ ಸಂತೆ ಮತ್ತು ಗಣಿತ ದಿನಾಚರಣೆ ಮಕ್ಕಳಲ್ಲಿ ಪ್ರೇರಕ ಶಕ್ತಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಯೋಗಿತಾ ನಾಯ್ಕ್, ಶಿಕ್ಷಕರಾದ ಶಾಮಲಾ ಪಟಗಾರ, ಶ್ರೀಧರ್ ಗೌಡ, ನಯನ ಪಟಗಾರ್, ಭಾಗ್ಯಲಕ್ಷ್ಮಿ ನಾಯಕ್, ಲಕ್ಷ್ಮಿ ನಾಯ್ಕ ಇದ್ದರು. ಮಕ್ಕಳ ಸಂತೆಯಲ್ಲಿ ಪಾಲಕ ಪೋಷಕರು ಸ್ಥಳೀಯರು ಶಿಕ್ಷಕರು ಭಾಗಿಯಾಗಿ ವ್ಯವಹಾರ ನಡೆಸಿದರು. ಸಂತೆಯಲ್ಲಿ ಸುಮಾರು 12 ಸಾವಿರ ರೂಪಾಯಿ ವ್ಯವಹಾರ ನಡೆದಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು ಕಾರಣವಾಯಿತು.

300x250 AD
Share This
300x250 AD
300x250 AD
300x250 AD
Back to top