Slide
Slide
Slide
previous arrow
next arrow

ಶಿಕ್ಷಕರಿಲ್ಲದ ಶಾಲೆ: ಪಾಲಕರಿಂದ ಪ್ರತಿಭಟನೆ:ಅಧಿಕಾರಿಗಳ ಆಶ್ವಾಸನೆಯ ಮೇರೆಗೆ ಪ್ರತಿಭಟನೆ ಹಿಂದಕ್ಕೆ

300x250 AD

ಅಂಕೋಲಾ: ತಾಲೂಕಿನ ಮೇಲಿನ ಮಂಜಗುಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಾಲಾಭಿವೃದ್ಧಿ ಸಮಿತಿ ಮತ್ತು ಪಾಲಕರು ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶಿಕ್ಷಕರನ್ನು ನಿಯೋಜಿಸುವ ಭರವಸೆ ನೀಡಿದ್ದರಿಂದಾಗಿ ಈ ಪ್ರತಿಭಟನೆಯನ್ನು ನಿಲ್ಲಿಸಿದರು.
ಶಿಕ್ಷಣ ಸಂಯೋಜಕ ಬಿ.ಎಲ್.ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಸಿ.ಆರ್.ಪಿ. ಕೃಷ್ಣ ನಾಯ್ಕ ಶಾಲೆಗೆ ಆಗಮಿಸಿದರು. ಇಬ್ಬರು ಶಿಕ್ಷಕರನ್ನು ಈಗಾಗಲೇ ಈ ಶಾಲೆಗೆ ನಿಯೋಜಿಸಿದ್ದೇವೆ. ಡಿಸೆಂಬರ್ ಅಂತ್ಯದವರೆಗೆ ಮೂವರು ಶಿಕ್ಷಕರನ್ನು ನೀಡಲಿದ್ದು, ಜನವರಿ ಆರಂಭದಲ್ಲಿಯೇ ನಾಲ್ಕು ಶಿಕ್ಷಕರನ್ನು ಇಲ್ಲಿ ನೇಮಕ ಮಾಡಲಾಗುವುದು ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ ಮಾತನಾಡಿ, ಈಗ ಹೆಚ್ಚುವರಿ ಸಮಸ್ಯೆ ಉಂಟಾಗಿರುವುದರಿoದ ಸ್ವಲ್ಪ ವ್ಯತ್ಯಾಸವಾಗಿದೆ. ಇಲ್ಲಿಯ ಪಾಲಕರ ಬೇಡಿಕೆ ನ್ಯಾಯಯುತವಾಗಿದ್ದು, ತಕ್ಷಣದಿಂದಲೇ ಮೂವರು ಶಿಕ್ಷಕರು ಇರಲಿದ್ದು, ನಂತರ ನಾಲ್ಕು ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಕರಲ್ಲಿ ವಿನಂತಿಸಿದರು.
ಈ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದು, 4 ಶಿಕ್ಷಕರು ಇರಬೇಕಿತ್ತು. ಆದರೆ ಅತಿಥಿ ಶಿಕ್ಷಕಿ ಒಬ್ಬರನ್ನು ಬಿಟ್ಟು ಉಳಿದವರು ಕೂಡ ರಜೆಯ ಮೇಲೆ ತೆರಳಿದ್ದರಿಂದ ಈ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಪಾಲಕರು ಪ್ರತಿಭಟನೆ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸಿದ್ದರಿಂದಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ವಿ. ನಾಯ್ಕ, ಉಪಾಧ್ಯಕ್ಷೆ ಮಂಜುಳಾ ಹರಿಕಂತ್ರ, ಆಶಾ ತಾಂಡೇಲ, ಮಾಲಾ ಹರಿಕಂತ್ರ, ಗಾಂಧಾರಿ ಹರಿಕಂತ್ರ, ಅನಿಲ ಜಾನು ನಾಯ್ಕ, ವೆಂಕಟರಮಣ ಕೆ. ನಾಯ್ಕ, ಅರುಣ ವಿ. ನಾಯ್ಕ, ಮಾರುತಿ ಕೆ. ನಾಯ್ಕ, ಈಶ್ವರ ಎಸ್. ನಾಯ್ಕ ಸೇರಿದಂತೆ ಹಲವು ಪಾಲಕರು ಉಪಸ್ಥಿತರಿದ್ದರು.

ಕೋಟ್…
ಅಧಿಕಾರಿಗಳ ಭರವಸೆಯಂತೆ ಡಿಸೆಂಬರ್ ಅಂತ್ಯದವರೆಗೆ ಕಾಯುತ್ತೇವೆ. ಜನವರಿ ಮೊದಲ ವಾರದಲ್ಲಿ ಅತಿಥಿ ಶಿಕ್ಷಕಿಯನ್ನು ಬಿಟ್ಟು ಮತ್ತೆ ಖಾಯಂ ಮೂವರು ಶಿಕ್ಷಕರನ್ನು ನೇಮಕ ಮಾಡದಿದ್ದಲ್ಲಿ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಗುವುದು.
• ಸಂತೋಷ ವಿ.ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

300x250 AD
Share This
300x250 AD
300x250 AD
300x250 AD
Back to top