• Slide
    Slide
    Slide
    previous arrow
    next arrow
  • ಲಯನ್ಸ್ ಅಂಗಳದಲ್ಲಿ ಚಿಣ್ಣರ ಮನರಂಜನೆಯ ರಸದೌತಣ

    300x250 AD

    ಶಿರಸಿ: ನಗರದ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಂಭ್ರಮದ ಮುಕ್ತಾಯ ದಿನವಾಗಿದ್ದು ವಿದ್ಯಾರ್ಥಿಗಳಿಂದ ಹಲವು ಬಗೆಯ ಸಾಂಸ್ಕೃತಿಕ ರಸದೌತಣ ಏರ್ಪಟ್ಟಿತ್ತು. ವೇದಘೋಷದ ನಂತರ ಶಾರದೆಯ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸಹಕಾರ ರತ್ನ ಪುರಸ್ಕೃತರಾದ ಆರ್.ಎಸ್ .ಹೆಗಡೆ ಗೋರ್ಸಗದ್ದೆ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದರು. ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವಿ ನಾಯಕ್ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು.
    ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪ್ರೊಫೆಸರ್ ಎನ್.ವಿ.ಜಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಎಂ.ಜೆ.ಎಫ್.ಲಯನ್ ಪ್ರಭಾಕರ್ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ತ್ರಿವಿಕ್ರಂ ಪಟವರ್ಧನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಜೆ.ಎಫ್. ಲಯನ್ ರಮಾ ಪಟವರ್ಧನ್, ಲಯನ್ಸ್ ಎಜುಕೇಶನ್ ಸೊಸೈಟಿಯ ಸದಸ್ಯರಾದ ಲ.ಕೆ.ಬಿ.ಲೊಕೇಶ್ ಹೆಗಡೆ, ಲ. ಶ್ಯಾಮಸುಂದರ್ ಭಟ್, ಲಯನ್ ಅಶ್ವಥ್ ಹೆಗಡೆ, ಲಿಯೋ ಅಡ್ವೈಸರ್, ಎಂಜೆಎಫ್.ಲ. ಜ್ಯೋತಿ ಭಟ್, ಲಯನ್ ವಿನಯ ಹೆಗಡೆ ಹಾಗೂ ಇನ್ನಿತರ ಲಯನ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳ ಹಸ್ತ ಪ್ರತಿ ‘ಅಂಕುರ’ವನ್ನುಬಿಡುಗಡೆಗೊಳಿಸಲಾಯಿತು. ರಾಷ್ಟ್ರಮಟ್ಟದ ಸಾಧನೆಗೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆಗೆ ಗಮನಾರ್ಹ ಕೊಡುಗೆ ನೀಡಿದ ಪಾಲಕರಾದ ನವನೀತ ಶೆಟ್ಟಿ, ಪ್ರವೀಣ ಹೆಗಡೆ, ಜಗದೀಶ ಗುಡಿಗಾರ ಇವರನ್ನು ಕೂಡ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
    ರಂಗುರಂಗಿನ ಉಡುಪುಗಳೊಂದಿಗೆ ಸಮಗ್ರ ಭಾರತದ ವಿವಿಧತೆಯಲ್ಲಿ ಏಕತೆಯನ್ನು ಸಾರುವಂತೆ ವಿದ್ಯಾರ್ಥಿಗಳು ಬಗೆ ಬಗೆಯ ಮನರಂಜನೆ ಕಾರ್ಯಕ್ರಮದೊಂದಿಗೆ ಪ್ರೇಕ್ಷಕರ ಮನಸೂರೆಗೊಂಡರು.ಪುಟ್ಟ ಪುಟ್ಟ ಮಕ್ಕಳು ಬಣ್ಣ ಬಣ್ಣದ ಹುಡುಗಿ ತೊಟ್ಟು ಬೇರೆ ಬೇರೆ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದರೆ, ಪ್ರಭುದ್ಧ ವಿದ್ಯಾರ್ಥಿಗಳು ಕೂಡ ವಿವಿಧ ರೀತಿಯ ಸಾಹಸಮಯ ಪ್ರದರ್ಶನ ಕೂಡ ನೀಡಿದರು. ಭರತನಾಟ್ಯ, ಯಕ್ಷಗಾನ, ಯೋಗ ನೃತ್ಯ, ಪಿರಮಿಡ್ ನೃತ್ಯ, ಕೃಷ್ಣನ ಜನ್ಮ ವೃತ್ತಾಂತದ ನೃತ್ಯ, ಶ್ರೀರಾಮ ಭಂಟರ ನೃತ್ಯ, ವಿವಿಧ ರಾಜ್ಯಗಳ ಜಾನಪದ ನೃತ್ಯ, ಮಹಾಭಾರತ ದಂತಹ ಹತ್ತು ಹಲವು ಬಗೆಯ ನಮ್ಮ ದೇಶದ ಸಾಂಪ್ರದಾಯಿಕ ಕಲೆಗಳನ್ನು ನೃತ್ಯ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿ, ಲಯನ್ಸ ವಿದ್ಯಾರ್ಥಿಗಳು ಪ್ರತಿಭೆಯ ಆಗರ ಎನ್ನುವುದನ್ನು ಸಾಂಕೇತಿಕವಾಗಿ ತೆರೆದಿಟ್ಟರು. ಒಟ್ಟಿನಲ್ಲಿ ವಾರ್ಷಿಕೋತ್ಸವವು ಶಿರಸಿಯ ಕಲಾವಂತಿಕೆಯ ಪ್ರದರ್ಶನದ ಸಾಂಸ್ಕೃತಿಕ ಉತ್ಸವವಾಗಿ ರೂಪುಗೊಂಡಿದ್ದರಲ್ಲಿ ಎರಡು ಮಾತಿಲ್ಲ.
    ಶಾಲೆಯ ಆಡಳಿತ ಮಂಡಳಿಯವರು ಮೂರು ದಿನದ ಸಂಭ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಜೊತೆಗೆ ಕೈಜೋಡಿಸಿದ ಮುಖ್ಯೋಪಾಧ್ಯಾಯರನ್ನು, ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ,ಪಾಲಕರನ್ನು ತುಂಬು ಹೃದಯದಿಂದ ಅಭಿನಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top