Slide
Slide
Slide
previous arrow
next arrow

ಸಾಲಮನ್ನಾ ಹಣ ಬಿಡುಗಡೆ, ಬೆಳೆವಿಮೆ ಪರಿಹಾರದಲ್ಲಿ ರೈತಪರ ನಿಲುವು ಕೈಗೊಳ್ಳಲು ಮನವಿ ಸಲ್ಲಿಕೆ

300x250 AD

ಶಿರಸಿ: ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು  ಸಾಲಮನ್ನಾ ಘೋಷಿಸಿ 4 ವರ್ಷಗಳು‌ ಕಳೆದರೂ  ಅರ್ಹ ಕೃಷಿಕರಿಗೆ ಸಾಲಮನ್ನಾ ಹಣವು ದೊರಕದಿರುವುದು ಕೃಷಿಕರಲ್ಲಿ‌ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಸಾಲಮನ್ನಾ ಹಣವನ್ನು ಬಿಡುಗಡೆಗೊಳಿಸುವಂತೆ‌ ಹಾಗೂ ಬೆಳೆ ವಿಮೆ ಪರಿಹಾರ ದೊರಕುವಲ್ಲಿ ಉಂಟಾಗುತ್ತಿರುವ ತೊಡಕುಗಳನ್ನು ನಿವಾರಿಸಿ ರೈತಪರ ನಿಲುವು‌ ತೆಗೆದುಕೊಂಡು ಕ್ರಮ‌ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಕಾರ್ಯದರ್ಶಿ ಎನ್.ಬಿ.ಹೆಗಡೆ ಮತ್ತಿಹಳ್ಳಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್’ಗೆ ಮನವಿ ಸಲ್ಲಿಸಿದ್ದಾರೆ.

ಸಾಲಮನ್ನಾ ಪಡೆಯಲು ಅರ್ಹತೆ ಹೊಂದಿದ್ದರೂ, ಕೆಲವು ಕೃಷಿಕರ ಹೆಸರು ಗ್ರೀನ್ ಲಿಸ್ಟ್ ಗೆ ಬಂದಿದ್ದರೂ ಇನ್ನೂ ಹಣ ದೊರಕದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.774 ಕೃಷಿಕರು ಗ್ರೀನ್ ಲಿಸ್ಟ್ ಅರ್ಹತೆ ಹೊಂದಿದ್ದು‌ 5.07ಕೋಟಿ ರೂ. ಹಣ ಬಿಡುಗಡೆಗೊಳ್ಳಬೇಕಿದೆ.

300x250 AD

ಹಾಗೆಯೇ ಕೇಂದ್ರ ಸರ್ಕಾರವು ಕೃಷಿಕರ ಬೆಳೆಗಳಿಗೆ ಹವಾಮಾನಾಧಾರಿತ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ವಿಮಾ ಪರಿಹಾರ ದೊರಕುವಲ್ಲೂ ಸಹ ಅನ್ಯಾಯಗಳು ಆಗುತ್ತಿದೆ.ಅತಿಯಾದ ಮಳೆ,‌ಹವಾಮಾನ ವೈಪರೀತ್ಯಗಳಿಂದ ಬೆಳೆ ನಷ್ಟ ಅನುಭವಿಸಿದರೂ ಸೂಕ್ತ ಪರಿಹಾರ ದೊರಕಿಲ್ಲ. 2021-22 ನೇ ಸಾಲಿನಲ್ಲಿ ದೊರಕಿದ ಪರಿಹಾರ ತೀರಾ ಅವೈಜ್ಞಾನಿಕವಾಗಿದ್ದು, ಸಿದ್ದಾಪುರ ತಾಲೂಕಿನ ರೈತರಿಗೆ ಕಿಂಚಿತ್ತೂ ಪರಿಹಾರ ದೊರಕದಿರುವುದು ಬೇಸರದ ಸಂಗತಿಯಾಗಿದೆ.
ಇದಕ್ಕೆ ಸೂಕ್ತ ಪರಿಹಾರಗಳನ್ನು ನೀಡಿ,‌ ಎರಡೂ ಬೇಡಿಕೆಗಳನ್ನು ಅತೀ ಶೀಘ್ರವಾಗಿ ಜಾರಿಗೊಳಿಸಿ ರೈತಪರ ನಿರ್ಣಯಗಳನ್ನು ತೆಗೆದುಕೊಂಡು, ನ್ಯಾಯ ಒದಗಿಸುವಂತೆ ಮನವಿಯಲ್ಲಿ‌ ವಿನಂತಿಸಲಾಗಿದೆ.

Share This
300x250 AD
300x250 AD
300x250 AD
Back to top