ಶಿರಸಿ: ನಗರದ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗ ಐಕ್ಯುಎಸಿ ಸಹಯೋಗದೊಂದಿಗೆ ಕಾಲೇಜಿನಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಧ್ಯಾಪಕರುಗಳಿಗಾಗಿ ನ್ಯಾಕ್ ಮಾನ್ಯತೆ ಪಡೆಯುವಲ್ಲಿ ತಂತ್ರಜ್ಞಾನದ ಪಾತ್ರ ಎಂಬ ವಿಷಯದ ಕುರಿತು ರಾಣೆಬೆನ್ನೂರಿನ ವಿಶನ್ ಇನ್ಪೊಟೆಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುರಾಜ್ ಎಂ. ಕೆ. ಮಾತನಾಡಿ ಇಂದು ಅಂತರ್ಜಾಲದ ಮೂಲಕವೆ ನ್ಯಾಕ್ ಸಂಬಂದಿತ ಕೆಲಸಗಳನ್ನು ಮಾಡಬೇಕಾಗಿದೆ. ನ್ಯಾಕ್ ದೃಷ್ಟಿಯಿಂದ ತಾಂತ್ರಿಕ ಸಲಕರಣೆಗಳ ಹೊಂದುವಿಕೆ ಮತ್ತು ಬಳಕೆಯ ಮಹತ್ವ ಪಡೆದಿದೆ. ವೆಬ್ಸೈಟ್,ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ, ಐಕ್ಯುಎಸಿ ಸಂಚಾಲಕ ಡಾ.ಎಸ್ಎಸ್ ಭಟ್, ಪ್ರೊ. ಗಣೇಶ ಹೆಗಡೆ, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಗಣಕಯಂತ್ರ ವಿಭಾಗ ಮುಖ್ಯಸ್ಥ ಪ್ರೊ. ಕಮಲಾಕರ ಹೆಗಡೆ ಸ್ವಾಗತಿಸಿ,ವಂದಿಸಿದರು.