• first
  Slide
  Slide
  previous arrow
  next arrow
 • ಕ್ರೀಡೆಯ ಗೆಲುವಿಗೆ ಸಹನೆ,ಸಹಕಾರ, ಸಾಮರ್ಥ್ಯ ಇರಬೇಕು: ಪ್ರಭಾಕರ್ ಹೆಗಡೆ

  300x250 AD

  ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಡಿ.23ರಂದು ಶಾಲಾ ವಾರ್ಷಿಕ ಕ್ರೀಡಾಕೂಟ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.

  ನಂತರ ಇವರು ಮಾತನಾಡುತ್ತಾ, ಕ್ರೀಡೆಯ ಗೆಲುವಿಗೆ ಸಹನೆ, ಸಹಕಾರ, ಸಾಮರ್ಥ್ಯ ಬೇಕು. ಅಂದರೆ ಬಿದ್ದರೆ ಏಳಬೇಕೆ ವಿನಃ ಬಿದ್ದುಕೊಂಡೆ ಇರಬಾರದು, ಸೋತೆನೆಂದು ಅಂಜದ ಮುಂದೆ ನಡೆದರೆ ಗೆಲುವು ನಿನ್ನದಾಗುವುದು ಎಂದು ವಿದ್ಯಾರ್ಥಿಗಳಿಗೆ ಹಿತವಚನಗಳನ್ನಾಡಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಭಟ್ ವಾನಳ್ಳಿ ಎಲ್ಲರನ್ನು ಸ್ವಾಗತಿಸಿದರೆ, ದೈಹಿಕ ಶಿಕ್ಷಕ ಸತೀಶ ಕಡೆ ನಿರ್ವಹಿಸಿದರು. ಶಿಕ್ಷಕ ಪ್ರಸಾದ ಹೆಗಡೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಅತ್ಯಂತ ಉತ್ಸಾಹದಿಂದ ಕ್ರೀಡಾಕೂಟ ಜರುಗಿತು.

  300x250 AD
  Share This
  300x250 AD
  300x250 AD
  300x250 AD
  Back to top