• Slide
    Slide
    Slide
    previous arrow
    next arrow
  • ಡಿ. 25ಕ್ಕೆ ಕಲಗದ್ದೆಯಲ್ಲಿ ಅನಂತೋತ್ಸವ, ಯಕ್ಷಗಾನ ಸಂಭ್ರಮ

    300x250 AD

    ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ಡಿ.25ರ ಸಂಜೆ 7 ರಿಂದ ಮೂರು ದಿನಗಳ ಕಾಲ ಅನಂತೋತ್ಸವ, ಯಕ್ಷಗಾನ ಸಂಭ್ರಮ ಕಾರ್ಯಕ್ರಮವನ್ನು ಇಲ್ಲಿನ‌ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದಲ್ಲಿ ಹಮ್ಮಿಕೊಂಡಿದೆ.
    25ರ ಸಂಜೆ 7ಕ್ಕೆ ಅನಂತೋತ್ಸವ ನಡೆಯಲಿದ್ದು, ಈ ವೇಳೆ ಹಿರಿಯ ಯಕ್ಷಗಾನ ಕಲಾವಿದ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ ನೆರವೇರಲಿದೆ.
    ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಅಕಾಡೆಮಿ‌ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ನೆರವೇರಿಸಲಿದ್ದು, ಪ್ರಶಸ್ತಿ ಪ್ರದಾನವನ್ನು‌
    ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ಕೆರೇಕೈ ನೆರವೇರಿಸಲಿದ್ದಾರೆ.
    ಅಭಿನಂದನಾ‌ ನುಡಿಯನ್ನು ಸೆಲ್ಕೋ‌ ಇಂಡಿಯಾ‌ ಸಿಇಓ ಮೋಹನ ಭಾಸ್ಕರ ಹೆಗಡೆ ನುಡಿಯಲಿದ್ದಾರೆ.
    ಅತಿಥಿಗಳಾಗಿ ಕಸಂಇ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ‌ ಎಂ. ಸಹಕಾರಿ ರತ್ನ ಆರ್.ಎಂ.ಹೆಗಡೆ ಬಾಳೇಸರ, ಆರ್.ಜಿ.ಭಟ್ಟ ವರ್ಗಾಸರ, ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಮೊಕ್ತೆಸರ ವಿನಾಯಕ ಹೆಗಡೆ ಕಲಗದ್ದೆ, ವಿದ್ವಾನ್ ದತ್ತಮೂರ್ತಿ ಭಟ್ಟ‌ ಶಿವಮೊಗ್ಗ ಭಾಗವಹಿಸಲಿದ್ದು, ಪ್ರತಿಷ್ಠಾನ ಅಧ್ಯಕ್ಷ ವಿ.ಎಂ‌‌‌ ಭಟ್ಟ ಕೊಳಗಿ ಅಧ್ಯಕ್ಷತೆ ವಹಿಸಿಕೊಳ್ಳುವರು.
    ಬಳಿಕ ನಡೆಯಲಿರುವ ‘ಕಾರ್ತವೀರ್ಯಾರ್ಜುನ’ ಯಕ್ಷಗಾನದ
    ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ದಂಟ್ಕಲ್ ‌ಸತೀಶ ಹೆಗಡೆ, ಮಹೇಶ ಹೆಗಡೆ, ಮಂಜುನಾಥ ಗುಡ್ಡೆದಿಂಬ, ಭಾರ್ಗವ್ ಕೇಡಲೇಸರ,‌ ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ‌ ಸಿದ್ದಾಪುರ, ಪ್ರಭಾಕರ ಹಣಜಿಬೈಲ್, ವಿ. ದತ್ತಮೂರ್ತಿ ಭಟ್ ಶಿವಮೊಗ್ಗ, ಸಂಜಯ ಬಿಳಿಯೂರು, ಸದಾಶಿವ‌ ಮಲವಳ್ಳಿ, ನಾಗೇಂದ್ರ ಭಟ್ಟ‌ ಮುರೂರು,
    ವೆಂಕಟೇಶ‌ ಬೊಗ್ರಿಮಕ್ಕಿ, ಪ್ರಣವ ಭಟ್, ಅವಿನಾಶ ಕೊಪ್ಪ, ತುಳಸಿ ಹೆಗಡೆ ಶಿರಸಿ ಭಾಗವಹಿಸುವರು.
    ಡಿ.26 ರಂದು ಯಕ್ಷಗಾನ ಸಂಭ್ರಮ: ಅಂದಿನ ಕಾರ್ಯಕ್ರಮವನ್ನು ಕಸಂಇ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ‌ ಎಂ. ಉದ್ಘಾಟಿಸಲಿದ್ದು,
    ಕಲಾವಿದ ಕೊಂಡದಕುಳಿ ರಾಮಚಂದ್ರ, ವಿನಾಯಕ ಹೆಗಡೆ ಕಲಗದ್ದೆ,
    ಸತೀಶ ದಂಟ್ಕಲ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿ.ಎಂ‌‌‌ ಭಟ್ಟ ಕೊಳಗಿ ವಹಿಸಿಕೊಳ್ಳುವರು.
    ಬಳಿಕ ‘ಸುಧನ್ವಾರ್ಜುನ ಕಾಳಗ’ ಯಕ್ಷಗಾನ ನಡೆಯಲಿದೆ. ಕೊಳಗಿ, ದಂಟ್ಕಲ್ , ಮಹೇಶ ಹೆಗಡೆ, ಮಂಜುನಾಥ ಗುಡ್ಡೆದಿಂಬ, ಭಾರ್ಗವ್ ಕೇಡಲೇಸರ ಹಿಮ್ಮೇಳದಲ್ಲಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕಲಗದ್ದೆ, ಅಶೋಕ ಭಟ್ಟ‌ ಸಿದ್ದಾಪುರ, ಗಣಪತಿ ತೋಟಿ, ಪ್ರಭಾಕರ ಹಣಜಿಬೈಲ್, ವಿ. ದತ್ತಮೂರ್ತಿ ಭಟ್ ಶಿವಮೊಗ್ಗ, ಸಂಜಯ ಬಿಳಿಯೂರು, ಸದಾಶಿವ‌ ಮಲವಳ್ಳಿ, ನಾಗೇಂದ್ರ ಭಟ್ಟ‌ ಮುರೂರು, ವೆಂಕಟೇಶ‌ ಬೊಗ್ರಿಮಕ್ಕಿ, ಪ್ರಣವ ಭಟ್, ಅವಿನಾಶ ಕೊಪ್ಪ, ತುಳಸಿ ಹೆಗಡೆ ಶಿರಸಿ ಮುಮ್ಮೇಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ‌.
    ಡಿ.27ರಂದು ಯಕ್ಷಗಾನ‌ ಸಂಭ್ರಮ:
    ಡಿ.27ರಂದು ‘ಕಂಸವಧೆ’ ಯಕ್ಷಗಾನ ನಡೆಯಲಿದೆ. ಕೊಳಗಿ, ದಂಟ್ಕಲ್ , ಮಹೇಶ ಹೆಗಡೆ, ಮಂಜುನಾಥ ಗುಡ್ಡೆದಿಂಬ, ಭಾರ್ಗವ್ ಕೇಡಲೇಸರ ಹಿಮ್ಮೇಳದಲ್ಲಿ, ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ‌ ಸಿದ್ದಾಪುರ, ಮೋಹನ ಭಾಸ್ಕರ ಹೆಗಡೆ, ಪ್ರಭಾಕರ ಹಣಜಿಬೈಲ್, ವಿ. ದತ್ತಮೂರ್ತಿ ಭಟ್ ಶಿವಮೊಗ್ಗ, ಸಂಜಯ ಬಿಳಿಯೂರು, ಸದಾಶಿವ‌ ಮಲವಳ್ಳಿ, ನಾಗೇಂದ್ರ ಭಟ್ಟ‌ ಮುರೂರು, ವೆಂಕಟೇಶ‌ ಬೊಗ್ರಿಮಕ್ಕಿ, ಪ್ರಣವ ಭಟ್, ಅವಿನಾಶ ಕೊಪ್ಪ,ತುಳಸಿ ಹೆಗಡೆ ಶಿರಸಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top