ಯಲ್ಲಾಪುರ: ಮಂಗಲಾ ಹಾಗೂ ಮಧುಕೇಶವ ಭಾಗ್ವತ ದಂಪತಿಯ ಮೂರು ಕೃತಿಗಳಾದ ಮಧುರ- ಭಾವಸಂಗಮ (ಕಾವ್ಯಗುಚ್ಛ), ಗೊಂಚಲು (ಸಣ್ಣ ಕಥೆಗಳ ಸಂಕಲನ), ನಂದಗೋಪನ ಉಲಿಗಳು (ಮುಕ್ತಕಗಳ ಸಂಕಲನ) ಲೋಕಾರ್ಪಣೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ಡಿ.25ರಂದು ಮಧ್ಯಾಹ್ನ ತಾಲೂಕಿನ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ನಡೆಯಲಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಈಶ್ವರ ಜಿ.ಪಂಡಗಾವಿ ಬೆಳಗಾವಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ವನಜಾಕ್ಷಿ ಹೆಬ್ಬಾರ್, ಸಾಹಿತಿ ಶೋಭಾ ಹರಿಪ್ರಸಾದ್ ಉಪಸ್ಥಿತರಿರುವರು.
ಸುಮನಾ ಹೇರ್ಳೆ ಕೋಟ ಹಾಗೂ ಅರುಣಾ ಶ್ರೀನಿವಾಸ ಉಜಿರೆ ಕೃತಿಗಳ ಅವಲೋಕನ ಮಾಡಲಿದ್ದಾರೆ. ಮಾನ್ಯತಾ ಭಾಗ್ವತ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಡಾ.ರವಿ ಭಟ್ಟ ಬರಗದ್ದೆ ನಿರ್ವಹಣೆ ಮಾಡಲಿದ್ದಾರೆ ಎಂದು ಸಾಹಿತ್ಯ ಪರಿಷತ್ ಹಾಗೂ ಕೃತಿಗಳ ರಚನೆಕಾರು ತಿಳಿಸಿದ್ದಾರೆ.