ಹೊನ್ನಾವರ: ಶಿರಸಿಯ ನಾಟ್ಯಂಜಲಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಹೆಜ್ಜೆ ಗೆಜ್ಜೆ ನಾದ’ ನೃತ್ಯ ಕಾರ್ಯಕ್ರಮ ಡಿ.25ರಂದು ಮಧ್ಯಾಹ್ನ 3.30ರಿಂದ ಪಟ್ಟಣದ ಪ್ರಭಾತನಗರದ ಲಯನ್ಸ್ ಸಭಾಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 3.30ರಿಂದ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ, 5 ಗಂಟೆಯಿಂದ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟ್ಯಾಂಜಲಿ ನೃತ್ಯ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಡಾ.ರಾಮಚಂದ್ರ ಎಮ್.ಕೆ., ಸಂಸ್ಕೃತ ಸಂಗೀತ ವಿದ್ವಾಂಸ ಡಾ.ಗಣಪತಿ ಭಟ, ಜಿವೋತ್ತಮ ನಾಯಕ, ವರದಿಗಾರ ಎಚ್.ಎಲ್.ನಗರೆ, ನಾಟ್ಯಾಂಜಲಿ ನಿರ್ದೇಶಕಿ ಡಾ.ಸಹನಾ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಂತರ ‘ಶ್ರೀಕೃಷ್ಣ ಲೀಲಾಮೃತ’ ವಿಶೇಷ ನೃತ್ಯ ರೂಪಕ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಡಿ.25ಕ್ಕೆ ‘ಹೆಜ್ಜೆ ಗೆಜ್ಜೆ ನಾದ’ ನೃತ್ಯ ಕಾರ್ಯಕ್ರಮ
