ಹೊನ್ನಾವರ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಅಲಭ್ಯತೆ ದುರಗೊಳಿಸುವ ಉದ್ದೇಶದಿಂದ 1,68,000 ರೂ. ಮೌಲ್ಯದ ನಾಲ್ಕು ಇನ್ವರ್ಟರ್ ಬ್ಯಾಟರಿಯನ್ನು ಸಾಮಾಜಿಕ ಕಾರ್ಯಕರ್ತರ ತಂಡ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿತು.
ಸುದೀರ್ಘ 50 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಅರುಣ್ ಬಿ. ಕಾರ್ಕಳ ಅವರು ಇದನ್ನು ಹಸ್ತಾಂತರಿಸಿ ಮಾತನಾಡಿ, ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಈ ಮಹತ್ತರ ಕಾರ್ಯ ಮಾಡಿದ ತಂಡಕ್ಕೆ ಅಭಿನಂದಿಸಿ, ಇದರ ಸದುಪಯೋಗ ಆಗಲಿ ಎಂದು ಆಶಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಕಿಣಿ ಮತ್ತು ವೈದ್ಯ ಪ್ರಕಾಶ ನಾಯ್ಕ ಮಾತನಾಡಿ, ಯಂತ್ರ ಹಾಳಾಗಿ ಸಮಸ್ಯೆಯಲ್ಲಿದ್ದಾಗ ಡಯಾಲಿಸಿಸ್ ಯಂತ್ರ ಪೂರೈಸಲು ಮುಂದಾಗಿರುವ ತಂಡಕ್ಕೆ, ಹಲವು ವರ್ಷಗಳಿಂದ ಕೇಂದ್ರಕ್ಕೆ ಇದ್ದ ಇನ್ವರ್ಟರ್ ಬ್ಯಾಟರಿಯ ತೊಂದರೆ ನಿವಾರಿಸಲು ಸಹಕರಿಸಿದ ಎಲ್ಲರಿಗೂ ಆಸ್ಪತ್ರೆಯ ತಂಡ ಅಭಿನಂದನೆ ಸಲ್ಲಿಸಿತು.
ಈ ಉಪಕರಣವನ್ನು ನೀಡಿದ ತಂಡದಲ್ಲಿ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಬಾಳೇರಿ, ಉಮೇಶ್ ಕಾಮತ್, ಮಹಾಲಕ್ಷ್ಮಿ ದಾಮೋದರ ಗ್ಯಾಸ್ ಮಾಲಕ ಗುರುದಾಸ್ ಶಾನಭಾಗ, ನಂದನ ಪ್ರಭು ತುಳಸಿ, ದಾಮೋದರ ಹೆಗಡೆ, ಡಯಾಲಿಸಿಸ್ ಘಟಕದ ಸಿಬ್ಬಂದಿಗಳು ಇದ್ದರು.