Slide
Slide
Slide
previous arrow
next arrow

‘ರೋಗ ಕಳೆಯುವ ರಾಗ ಮಾಲಿಕೆ’ ಕಾರ್ಯಕ್ರಮಕ್ಕೆ ಚಾಲನೆ

300x250 AD

ಶಿರಸಿ: ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ  ಸಂಗೀತ ನೃತ್ಯ ವಿಭಾಗ ಹಾಗೂ ಸಂಹಿತಾ ಮ್ಯೂಸಿಕ್ ಫೋರಂ ಸಹಯೋಗದಲ್ಲಿ ಆಯೋಜಿಸಿರುವ ‘ರೋಗ ಕಳೆಯುವ ರಾಗ ಮಾಲಿಕೆ’ ಎನ್ನುವ ಮೂರು ದಿನಗಳ ಸಂಗೀತ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ರುದ್ರವೀಣೆ ವಾದಕ ಪಂಡಿತ್. ಆರ್.ವಿ. ಹೆಗಡೆ  ಹಳ್ಳದಕೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ರುದ್ರ ವೀಣಾ ವಾದನವು ಭಗವಾನ್ ಶಿವನಿಂದ ಆವಿಷ್ಕಾರಗೊಂಡ ಗಂಭೀರ ಪ್ರಕೃತಿಯ ತಂತು ವಾದ್ಯವಾಗಿದೆ ಎಂದರು. ನಂತರ ಅಲಾಪ್ ಜೋಡ್ ಜಪ್ತಾಳದಲ್ಲಿ ಬೈರಾಗಿ ರಾಗವನ್ನು ನುಡಿಸಿ ನೆರೆದವರ ಮನ ತಣಿಸಿದರು. ಅನಂತ ಹೆಗಡೆ ತಬಲಾ ಸಾಥ್ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್ ಹಳೆಮನೆ ಮಾತನಾಡಿ ಚಿಕ್ಕವರಿಂದ ವಯೋವೃದ್ಧರವರೆಗೂ ಕಾಡುತ್ತಿರುವ ಸಮಸ್ಯೆ, ಅಸಿಡಿಟಿ, ಮಾನಸಿಕ ದೈಹಿಕ ಒತ್ತಡ, ಜೊತೆಗೆ ಏಕಾಗ್ರತೆಯು ಈ ರಾಗದ ಸಂಗೀತ ಕೇಳುವುದರಿಂದ ನಿವಾರಣೆ ಹೊಂದುತ್ತದೆ.ಇದರ  ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಹೇಳಿದರು. 

300x250 AD

  ಸಂಗೀತ ವಿಭಾಗದ ಉಪನ್ಯಾಸಕ ಅನಂತ್ ಹೆಗಡೆ ಪ್ರಾಸ್ತಾವಿಕ ಮಾತನಾಡಿ  ರಾಗವು  ಜೀವನದಲ್ಲಿ ಒಂದು ರೀತಿಯ ಸಂತೋಷವನ್ನು ನೀಡುತ್ತದೆ ಎಂದರು. ಈ ವೇಳೆ ನೃತ್ಯ ವಿಭಾಗದ ಉಪನ್ಯಾಸಕರಾದ ಸೀಮಾ ಭಾಗ್ವತ್ ಉಪಸ್ಥಿತರಿದ್ದರು. ಉಪನ್ಯಾಸಕ ಗೋಪಾಲಕೃಷ್ಣ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top