ನವದೆಹಲಿ: ಭಾರತದ ಪ್ರಥಮ ಮಾನವ ಬಾಹ್ಯಾಕಾಶ ಯಾನ ಗಗನಯಾನವನ್ನು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಗಗನಯಾನದ ಸಿಬ್ಬಂದಿಗಳ ಸುರಕ್ಷತೆಯ ಪ್ರಾಮುಖ್ಯತೆಯ ದೃಷ್ಟಿಯಿಂದ ಅಂತಿಮ ಮಾನವ ಬಾಹ್ಯಾಕಾಶ ಹಾರಾಟ- ‘H1 ಮಿಷನ್’ ಮೊದಲು ಎರಡು ಸಿಬ್ಬಂದಿ ರಹಿತ ಹಾರಾಟವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿವಿಧ ಹಾರಾಟ ಪರಿಸ್ಥಿತಿಗಳಲ್ಲಿ ಸಿಬ್ಬಂದಿಗಳ ಕಣ್ಗಾವಲು ವ್ಯವಸ್ಥೆ ಮತ್ತು ವಿಭಿನ್ನ ಹಾರಾಟಗಳಿಗೆ ಪ್ಯಾರಾಚೂಟ್ ಆಧಾರಿತ ಡೆಸಿಲರೇಶನ್ ವ್ಯವಸ್ಥೆಯನ್ನು ಪ್ರದರ್ಶಿಸಲು ಅಂತಿಮ ಮಿಷನ್‌ಗೂ ಮುಂಚಿತವಾಗಿ ಎರಡು ಮಾನವ ರಹಿತ ಹಾರಾಟ ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮುಂದಿನ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸಿಬ್ಬಂದಿಗಳಿಲ್ಲದ ‘G1 ಮಿಷನ್’ ಹಾರಾಟದ ಗುರಿ ಇದೆ ನಂತರ 2024 ರ ಎರಡನೇ ತ್ರೈಮಾಸಿಕದಲ್ಲಿ ‘G2’ ಅನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಗಗನಯಾನಕ್ಕೆ ಗೊತ್ತುಪಡಿಸಿದ ಗಗನಯಾತ್ರಿಗಳನ್ನು ಗುರುತಿಸಲಾಗಿದೆ ಮತ್ತು ಬೆಂಗಳೂರಿನಲ್ಲಿ ಅವರು ಮಿಷನ್-ನಿರ್ದಿಷ್ಟ ತರಬೇತಿಗೆ ಅವರು ಒಳಗಾಗುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೃಪೆ: http://news13.in