Slide
Slide
Slide
previous arrow
next arrow

ಮಕರಂದ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಂಕರ ಹೆಗಡೆ ಅವಿರೋಧ ಆಯ್ಕೆ

300x250 AD

ಶಿರಸಿ: ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಸಹಯೋಗದೊಂದಿಗೆ ಧಾರವಾಡ ಸಹಕಾರ ಹಾಲು ಒಕ್ಕೂಟದ ನಗರದ ಅಗಸೇಬಾಗಿಲಿನಲ್ಲಿರುವ ಕಚೇರಿಯಲ್ಲಿ ನಡೆದ ಮಕರಂದ ರೈತ ಉತ್ಪಾದಕರ ಸಹಕಾರ ಸಂಘ ನಿ., ಶಿರಸಿ ಉತ್ತರಕನ್ನಡದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸಂಘದ ಪ್ರಥಮ ಅಧ್ಯಕ್ಷರಾಗಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಶಂಕರ ಪರಮೇಶ್ವರ ಹೆಗಡೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಎಂ.ಎಸ್. ಶಿರಸಿಯ ನಿರ್ದೇಶಕರಾದ ರಾಮಚಂದ್ರ ಸುಬ್ರಾಯ ಹೆಗಡೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಸಂಘದ ಚುನಾವಣಾ ಅಧಿಕಾರಿಯಾದ ಸಹಾಯಕ ನಿಬಂಧಕರು ಸಹಕಾರ ಸಂಘಗಳು ಸಹಕಾರ ಇಲಾಖೆ ಶಿರಸಿ ಉಪ ವಿಭಾಗದ ಶ್ರೀನಿವಾಸ್ ಸಂಘದ ಕಚೇರಿಯಲ್ಲಿ ಘೋಷಣೆ ಮಾಡಿದರು.
ಮಕರಂದ ರೈತ ಉತ್ಪಾದಕರ ಸಹಕಾರ ಸಂಘ ನಿ., ಶಿರಸಿ ಉತ್ತರಕನ್ನಡದ ಮುಖ್ಯ ಪ್ರವರ್ತಕರನ್ನಾಗಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ ಲಿ., ಶಿರಸಿಯ ನಿರ್ದೇಶಕರಾದಂತಹ ಸುರೇಶ್ಚಂದ್ರ ಕೃಷ್ಣ ಹೆಗಡೆ ಅವರನ್ನು ನೇಮಿಸಿ ಶಿರಸಿ, ಸಿದ್ದಾಪುರ, ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕುಗಳ ಒಟ್ಟೂ 526 ಜನರಿಂದ ಷೇರು ಸಂಗ್ರಹಣೆ ಮಾಡಿ ದಿನಾಂಕ 19-07-2022 ರಂದು ಸಹಕಾರ ಸಂಘಗಳ ಅಡಿಯಲ್ಲಿ ಸಂಘವನ್ನು ನೊಂದಣಿ ಮಾಡಲಾಗಿತ್ತು. ಸಂಘದ ಆಡಳಿತ ಮಂಡಳಿಯ 17 ಸ್ಥಾನಕ್ಕಾಗಿ ಡಿಸೆಂಬರ್‌ 15,‌ 2022 ರಂದು ಚುನಾವಣೆಯನ್ನು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾನಕ್ಕೆ ತಲಾ ಒಂದರಂತೆ, ಹಿಂದುಳಿದ “ಅ” ವರ್ಗದ 2 ಸ್ಥಾನಕ್ಕೆ, ಮಹಿಳೆಯರ 2 ಸ್ಥಾನಕ್ಕೆ ತಲಾ ಒಂದರಂತೆ ನಾಮಪತ್ರಗಳು, ಸಾಮಾನ್ಯ ವರ್ಗದ 11 ಸ್ಥಾನಗಳಿಗೆ 20 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಂತರ 9 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸ್ವಯಂ ಹಿಂಪಡೆದ ಕಾರಣ ಉಳಿದ ಎಲ್ಲಾ ಸಾಮಾನ್ಯ ವರ್ಗದ 11 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಸಂಘದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದ ಶಂಕರ ಪರಮೇಶ್ವರ ಹೆಗಡೆ ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಸಹಯೋಗದೊಂದಿಗೆ ರೈತ ಉತ್ಪಾದಕ ಸಂಸ್ಥೆಯಾಗಿ ಮಕರಂದ ರೈತ ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ರೈತರ ಸಮಗ್ರ ಅಭಿವ್ರದ್ಧಿಗೆ ಹೈನುಗಾರಿಕೆಯ ಜೊತೆಗೆ ಜೇನು ಕೃಷಿಯು ಅತ್ಯಂತ ಸಹಾಯಕರವಾಗಲಿದ್ದು, ಸಂಘದ ಪ್ರಥಮ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸುವ ಅತೀ ದೊಡ್ಡ ಜವಾಬ್ದಾರಿಯನ್ನು ನೀಡಿದ ಸಂಘದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.


ನಂತರ ಮಾತನಾಡಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಒಂದು ಆಕಳನ್ನು ಪಾಲನೆ ಮಾಡಿ ಅದರಿಂದ ಉತ್ತಮ ರೀತಿಯ ಹಾಲನ್ನು ಉತ್ಪಾದನೆ ಮಾಡುವುದು ಎಷ್ಟು ಕಷ್ಟಕರವಾಗಿದೇಯೋ ಅದೇ ರೀತಿ ಒಂದು ಜೇನು ಪೆಟ್ಟಿಗೆಯನ್ನು ಮನೆಗೆ ತಂದು ಅದರಲ್ಲಿ ಜೇನುಹುಳುಗಳನ್ನು ಸಾಕಣೆ ಮಾಡಿ ಜೇನು ತುಪ್ಪವನ್ನು ಉತ್ಪಾದಿಸುವುದು ಸಹ ಅತ್ಯಂತ ಸವಾಲಿನ ಕೆಲಸವಾಗಲಿದೆ ಎಂದರು. ಆದರೆ ರೈತರ ಆರ್ಥಿಕ ಹಿತ ದೃಷ್ಠಿಯಿಂದ ರೈತರು ಸ್ವಾವಲಂಬಿಗಳಾಗಲು ಜೇನು ಕೃಷಿಯನ್ನು ಒಂದು ಸವಾಲಾಗಿ ಪರಿಗಣಿಸಿ ರೈತರು ಈ ಜೇನು ಕೃಷಿಯಿಂದ ಉತ್ತಮ ಆದಾಯ ಹೊಂದುವಂತಾಗಬೇಕು ಎಂದು ಆಶಿಸಿದರು. ನೂತನವಾಗಿ ಆರಂಭಗೊಂಡ ಈ ಸಂಘದ ಏಳಿಗೆ ನಮ್ಮೆಲ್ಲರ ಜವಾವ್ದಾರಿಯಾಗಿದ್ದು ನಾವೆಲ್ಲರೂ ಒಟ್ಟಾಗಿ ಸಂಘ ಹಾಗೂ ಜೇನು ಕೃಷಿಕರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಸಂಘದ ಯಶಸ್ಸಿಗೆ ಕಾರಣೀಕರ್ತರಾಗಿ ಜಿಲ್ಲೆಯಾದ್ಯಂತ ಸಂಘವನ್ನು ಒಂದು ಮಾದರಿ ಸಂಘವಾಗುವಂತೆ ಮಾಡಬೇಕೆಂದು ಈ ಮೂಲಕ ಅವರು ಕರೆ ನೀಡಿದರು. ಕೇವಲ ಜೇನು ಉತ್ಪನ್ನಗಳನ್ನು ಮಾತ್ರವಲ್ಲದೇ ರೈತರಿಂದ ಉತ್ಪಾದಿಸಲ್ಪಟ್ಟ ಇನ್ನೂ ಅನೇಕ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಿ ನಂದಿನಿ ಬ್ರ್ಯಾಂಡ್‌ನ ಅಡಿಯಲ್ಲಿ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿ ಯೋಗ್ಯ ದರವನ್ನು ನೀಡುವ ದೃಷ್ಠಿಯನ್ನು ನಮ್ಮ ಸಂಘ ಹೊಂದಿದ್ದು, ಅಧ್ಯಕ್ಷರಾದ ಶಂಕರ ಪರಮೇಶ್ವರ ಹೆಗಡೆ ಅವರು ಸ್ವತಃ ಉತ್ತಮ ಕೃಷಿಕರಾಗಿದ್ದು, ಮನೆಯಲ್ಲಿ 50 ಕ್ಕೂ ಹೆಚ್ಚಿನ ಅನೇಕ ತಳಿಗಳನ್ನು ಒಳಗೊಂಡತಂಹ ಆಕಳುಗಳನ್ನು ಸಾಕಾಣಿಕೆ ಮಾಡುತ್ತಾ ಯಶಸ್ವೀ ಹೈನುಗಾರರೆಂದು ಗುರುತಿಸಲ್ಲಟ್ಟಿದ್ದು, ಅವರ ನೇತೃತ್ವದಲ್ಲಿ ಸಂಘವು ಉತ್ತಮವಾಗಿ ಪ್ರಗತಿ ಹೊಂದುವ ವಿಶ್ವಾಸ ನಮ್ಮೆಲ್ಲರಿಗೂ ಇದೆ ಎಂದರು.

300x250 AD

ಈ ಸಂದರ್ಭದಲ್ಲಿ ಸುರೇಶ್ಚಂದ್ರ ಹೆಗಡೆಯವರು ಮಕರಂದ ರೈತ ಉತ್ಪಾದಕರ ಸಹಕಾರ ಸಂಘದ ನಿ.,ಶಿರಸಿ ಉತ್ತರಕನ್ನಡದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಮಕರಂದ ರೈತ ಉತ್ಪಾದಕರ ಸಹಕಾರ ಸಂಘದ ನಿ.,ಶಿರಸಿ ಉತ್ತರಕನ್ನಡದ ಆಯ್ಕೆಗೊಂಡಂತಹ 17 ಜನರನ್ನೊಳಗೊಂಡಂತಹ ನೂತನ ಆಡಳಿತ ಮಂಡಳಿಯ ವಿವರ ಹೀಗಿದೆ. ಶಂಕರ ಪರಮೇಶ್ವರ ಹೆಗಡೆ(ಅಧ್ಯಕ್ಷರು), ರಾಮಚಂದ್ರ ಸುಬ್ರಾಯ ಹೆಗಡೆ(ಉಪಾಧ್ಯಕ್ಷರು),ಸದಸ್ಯರಾಗಿ ಆದರ್ಶ ರಾಮಚಂದ್ರ ಹೆಗಡೆ(ಸಾಮಾನ್ಯ), ಅನಂತ ಪರಮೇಶ್ವರ ಹೆಗಡೆ, ಮಂಜುನಾಥ ರಾಮಚಂದ್ರ ಹೆಗಡೆ(ಸಾ), ನಾಗಪತಿ ದ್ಯಾವಾ ನಾಯ್ಕ(ಸಾ), ನರಸಿಂಹ ಕೃಷ್ಣ ಭಟ್‌(ಸಾ), ಪರಮೇಶ್ವರ ನರಸಿಂಹ ಗಾಂವ್ಕರ್‌(ಸಾ), ಪ್ರವೀಣ ಶಿವಲಿಂಗ ಗೌಡರ್‌(ಸಾ), ಸುರೇಶ್ಚಂದ್ರ ಕೃಷ್ಣ ಹೆಗಡೆ(ಸಾ), ವಿನಾಯಕ ವಿಶ್ವೇಶ್ವರ ಹೆಗಡೆ(ಸಾ), ಅಶೋಕ ಕೆರಿಯಪ್ಪ ನಾಯ್ಕ (ಹಿ.ವ.”ಅ”), ಪರಶುರಾಮ ವೀರಭದ್ರ ನಾಯ್ಕ (ಹಿ.ವ.”ಅ”), ರಮೇಶ ಫಕೀರಪ್ಪ ಕಟ್ಟಿಮನಿ(ಪ.ಪಂಗಡ), ಗುರುರಾಜ ಮೋಹನ ಚನ್ನಯ್ಯ(ಪ.ಜಾತಿ), ಅನಸೂಯಾ ಅನಂತ ಹೆಗಡೆ(ಮ), ವಿನೋದಾ ದೇವಾಡಿಗ(ಮ). ಆಯ್ಕೆಯಾಗಿದ್ದಾರೆ.


ಈ ಸಂದರ್ಭದಲ್ಲಿ ಸಹಾಯಕ ನಿಬಂಧಕರು ಸಹಕಾರ ಸಂಘಗಳು ಸಹಕಾರ ಇಲಾಖೆ ಶಿರಸಿ ಉಪ ವಿಭಾಗದ ಶ್ರೀನಿವಾಸ, ಧಾರವಾಡ ಸಹಕಾರ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕರಾದ ಅಭಿಷೇಕ ನಾಯ್ಕ, ಜಯಂತ ಪಟಗಾರ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top