• Slide
    Slide
    Slide
    previous arrow
    next arrow
  • ನೂತನ ಸಭಾಪತಿ ಹೊರಟ್ಟಿಗೆ ಅಭಿನಂದಿಸಿದ ಗಣಪತಿ ಉಳ್ವೇಕರ್

    300x250 AD

    ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ದಾಖಲೆ ಸೃಷ್ಟಿಸಿರುವ ಹಾಗೂ ಮೂರು ಬಾರಿ ಅವಿರೋಧವಾಗಿ ವಿಧಾನ ಪರಿಷತ್‌ನ ಸಭಾಪತಿಯಾಗಿ ಆಯ್ಕೆಯಾದ ಬಸವರಾಜ್ ಹೊರಟ್ಟಿ ಅವರನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಬುಧವಾರ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಭೇಟಿಯಾಗಿ ಅಭಿನಂದಿಸಿದರು.
    ನಮ್ಮ ಉತ್ತರಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದಿಂದ ತಾವು ಆಯ್ಕೆಯಾಗಿರುವುದು ನಮಗೆಲ್ಲ ತುಂಬಾ ಸಂತಸದ ವಿಷಯವಾಗಿದೆ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಸಹಕಾರವನ್ನು ಕೋರುವುದಾಗಿ ನೂತನ ಸಭಾಪತಿಗಳಿಗೆ ಗಣಪತಿ ಉಳ್ವೇಕರ ತಿಳಿಸಿದರು. ಅಲ್ಲದೆ ತಮ್ಮ ಕಾರ್ಯಾವಧಿಯ ವೇಳೆಯಲ್ಲಿ ಉತ್ತರಕನ್ನಡದ ಅಭಿವೃದ್ಧಿಗೆ ಹೆಚ್ಚಿನ ಸಹಕಾರದ ಅವಶ್ಯಕತೆ ಇದೆ ಎಂದು ತಿಳಿಸಿದರು.
    ಇದಕ್ಕೆ ಪ್ರತಿಕ್ರಿಸಿದ ಬಸವರಾಜ ಹೊರಟ್ಟಿ, ನಾನು ಸದನವನ್ನು ಸುಗಮವಾಗಿ ನಡೆಸಲು ನಿಮ್ಮ ಸಹಕಾರವನ್ನು ಕೋರುತ್ತೇನೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಹಾಗೂ ಇತರ ಎಲ್ಲಾ ಅಭಿವೃದ್ಧಿಗಳ ಕಾರ್ಯಕ್ಕೆ ಸದಾ ನನ್ನ ಸಹಕಾರವಿದೆ ಎಂದು ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top