ಹೊನ್ನಾವರ: ಹವ್ಯಕ ವಿಕಾಸ ವೇದಿಕೆಯ ವತಿಯಿಂದ 11ನೇ ವರ್ಷದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ತಾಲೂಕಿನ ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.
ಹವ್ಯಕ ಸಮಾಜ ಭಾಂದವರಿಗಾಗಿ ಕಳೆದ 10 ವರ್ಷದ ಹಿಂದೆ ಸಮಾನ ಮನಸ್ಕರರು ಒಗ್ಗೂಡಿ ಹವ್ಯಕ ವಿಕಾಸ ವೇದಿಕೆಯನ್ನು ರಚಿಸಿ, ಸ್ನೇಹಕ್ಕಾಗಿ ಕ್ರೀಡೆ ಹವ್ಯಕ ಟ್ರೋಪಿ ಆರಂಭಿಸಿದ್ದು ಪ್ರಸಕ್ತ ಸಾಲಿನ ಕ್ರೀಡಾಕೂಟ ಡಿ.25ರವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಕುಮಟಾ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಹವ್ಯಕ ವಿಕಾಸ ವೇದಿಕೆಯು ಕ್ರೀಡೆಯ ಜೊತೆಗೆ ಇತರೆ ಕಾರ್ಯಕ್ರಮದ ಮೂಲಕ ಸಮಾಜದ ಪ್ರೀತಿ ಪಾತ್ರಕ್ಕೆ ಒಳಗಾಗಿದೆ ಎಂದರು.
ಹವ್ಯಕ ವಿಕಾಸ ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಮಾತನಾಡಿ, ಕಳೆದ 10 ವರ್ಷದ ಹಿಂದೆ ಸಮಾನ ಮನಸ್ಕರು ಸೇರಿ ಹುಟ್ಟು ಹಾಕಿದ ಸಂಸ್ಥೆಯ ಮೂಲಕ ಸಮಾಜದ ಸಮಸ್ಯೆ, ವಧುವರರ ಸಮಾವೇಶ, ಉದ್ಯೋಗ ಮಾಹಿತಿ ಸೇರಿದಂತೆ ಇತರೆ ಕಾರ್ಯಕ್ರಮ ಯಶ್ವಸಿಯಾಗಿ ನಡೆಸಲಾಗಿದೆ. ಸ್ನೇಹಕ್ಕಾಗಿ ಕ್ರೀಡೆ ನಡೆಸುತ್ತಾ ಬಂದಿದ್ದು, ರಾಜ್ಯದೆಲ್ಲಡೆಯ ಸಮಾಜದವರು ಒಂದಡೆ ಸೇರಲು ಸುವರ್ಣಕಾಶ ದೊರೆಯಲಿದೆ ಎಂದರು.
ಹವ್ಯಕ ವಿಕಾಸ ವೇದಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತಿಚಿಗೆ ನಿಧನರಾದ ಎನ್.ಆರ್ ಹೆಗಡೆ ಅವರಿಗೆ ಸಂತಾಪ ಸೂಚಿಸಿ ಮೌನಾಚರಣೆ ಸಲ್ಲಿಸಿದರು. ವೇದಿಕೆಯಲ್ಲಿ ವಿಕಾಸ ವೇದಿಕೆಯ ನಿರ್ದೇಶಕರಾದ ಆರ್ ಜಿ ಹೆಗಡೆ, ಹೊಟೇಲ್ ಮಾಲಕ ವಿಠಲ ಭಟ್ಟ ಕರ್ಕಿ, ನಿವೃತ್ತ ಉಪತಹಶೀಲ್ದಾರ ಎಲ್.ಎ. ಭಟ್ಟ, ಶಿಕ್ಷಕ ವಿ.ಜಿ.ಹೆಗಡೆ ಮತ್ತಿತರರು ಇದ್ದರು. ರಾಜ್ಯದೆಲ್ಲಡೆಯ 26 ತಂಡಗಳು ಕ್ರಿಕೆಟ್ ಪಂದ್ಯಾವಳಿಗೆ ಹೆಸರು ನೊಂದಾಯಿಸಿದ್ದು, ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಕೂಟ ಜರುಗಿತು.