ಕಾರವಾರ: ರೋಟರಿ ಕ್ಲಬ್ ಪಶ್ಚಿಮ ವತಿಯಿಂದ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರರವರಿಗೆ ಅವರ ಸಮಾಜಸೇವೆ ಕಾರ್ಯವೈಖರಿಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಕಾಶ ರೇವಣಕರ ಎಲ್ಲರನ್ನು ಸ್ವಾಗತಿಸಿ ಶುಭ ಕೋರಿದರು. ಮಿಲಾಗ್ರಿಸ್ ಸಂಸ್ಥಾಪಕ ಜಾರ್ಜ್ ಫರ್ನಾಂಡಿಸ್ ಕಲ್ಲೂರವರ ಪಾತ್ರಪರಿಚಯ ಮಾಡಿದರು. ಸ್ಟಾನಿ ಫರ್ನಾಂಡಿಸ್ ಕಲ್ಲೂರವರ ಸಮಾಜಸೇವೆ ಕಾರ್ಯವೈಖರಿಯನ್ನು ವಿವರಿಸಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲ ಸದಸ್ಯರು ಸೇರಿ ಕಲ್ಲೂರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಇಬ್ರಾಹಿಂ ಕಲ್ಲೂರವರು ಮಾತನಾಡಿ, ಭ್ರಷ್ಟಾಚಾರ ನಿಲ್ಲದಿದ್ದರೆ ನಮ್ಮ ದೇಶವು ಪ್ರಗತಿ ಹೊಂದುವುದಿಲ್ಲ. ಸಮಾಜವನ್ನು ಪರಿವರ್ತಿಸಿ ಮತಕ್ಕಾಗಿ ನಮ್ಮ ಹಕ್ಕನ್ನು ಮಾರುವುದು ಸರಿಯಿಲ್ಲ ಎಂದರು. ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕೆಂದು ಕರೆ ನೀಡಿ, ಮುಂದಿನ ಪೀಳಿಗೆಯ ಯುವಕರು, ವಿದ್ಯಾವಂತರು ಮುಂದೆ ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾಲರಿಚ್ ಫರ್ನಾಂಡಿಸ್ ವಂದಿಸಿದರು. ಕ್ಯಾಪ್ಟನ್ ಡಿಸೋಜಾ, ಕ್ಲಬ್‌ನ ಖಜಾಂಜಿ ಮೆಹಬೂಬ್ ಮತ್ತು ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.
ರೋಟರಿಯಿಂದ ಇಬ್ರಾಹಿಂ ಕಲ್ಲೂರ್’ಗೆ ಸನ್ಮಾನ
