• Slide
  Slide
  Slide
  previous arrow
  next arrow
 • ಚಿಕ್ಕನಕೋಡ್ ಗ್ರಾಮಸ್ಥರ ಸಂಕಷ್ಟಕ್ಕೆ ನೆರವಾದ ಶಾಸಕ ಸುನೀಲ್ ನಾಯ್ಕ್

  300x250 AD

  ಹೊನ್ನಾವರ: ಶಾಸಕ ಸುನೀಲ್ ನಾಯ್ಕ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ ತಾಲೂಕಿನ ಚಿಕ್ಕನಕೋಡ್ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೇಬೈಲ್ ಗ್ರಾಮಕ್ಕೆ 4 ಕೀರು ಸೇತುವೆ, 3 ಸೇತುವೆ ನೀಡಿರುವುದಲ್ಲದೆ, ಅಕಾಲಿಕ ಮಳೆಗೆ ಶಿಥಿಲಾವಸ್ಥೆ ತಲುಪಿದ ಕಾಲು ಸೇತುವೆಗೆ ಒಂದೇ ತಿಂಗಳಲ್ಲಿ ಅನುದಾನ ನೀಡಿ ಗ್ರಾಮಸ್ಥರ ಕಷ್ಟಕ್ಕೆ ನೆರವಾಗಿದ್ದಾರೆ.
  ಹೊಸಗೋಡು, ರ‍್ಮುಡಿ ಸಂಪರ್ಕ ಸೇತುವೆ ಈ ಭಾಗದ ಬಹು ವರ್ಷದ ಬೇಡಿಕೆಯಾದ ಕಾಮಗಾರಿಗೆ 1.50 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ 75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸುನೀಲ, ಚುನಾವಣೆ ಪೂರ್ವದಲ್ಲಿ ಈ ಭಾಗದಲ್ಲಿ ನನಗೆ ಅತಿ ಹೆಚ್ಚಿನ ಮತ ನೀಡಿ ಆಶೀರ್ವದಿಸಿದ್ದಿರಿ. ನೀವು ನೀಡಿದ ಮತಕ್ಕೆ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಈ ಭಾಗಕ್ಕೆ 7.27ಕೋಟಿ ಅನುದಾನ ನಿಮ್ಮ ಭಾಗಕ್ಕೆ ನೀಡಿದ್ದೇನೆ.  ಇನ್ನೂ ಹಲವಾರು ರಸ್ತೆಗಳು ಬೇಡಿಕೆ ಸಲ್ಲಿಸಿದ್ದಿರಿ, ಮುಂದಿನ ದಿನಗಳಲ್ಲಿಯೂ ಸಹ ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು.


  ವೇದಿಕೆಯ ಮೇಲೆ ಉಪಸ್ಥಿತರಿದ್ದ ಜಿ.ಜಿ. ಶಂಕರ ಮಾತನಾಡಿ, ಈ ಹಿಂದೆ ಬಹಳಷ್ಟು ಶಾಸಕರನ್ನು ನೋಡಿದ್ದೇವೆ. ಕೇವಲ ಅಭಿವೃದ್ಧಿ ಎನ್ನುವುದು ಭಾಷಣದಲ್ಲಿತ್ತು. ಈಗಿನ ಶಾಸಕರ ಅಭಿವೃದ್ಧಿ ಕಾರ್ಯ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದೆ. ಜನಸಾಮಾನ್ಯರಿಗೆ ಅತ್ಯಂತ ಹತ್ತಿರದಿಂದ ಆತ್ಮೀಯತೆಯಿಂದ ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಸ್ಪಂದನೆ ನೀಡುವ ಗುಣ ಇವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕರಾಗಿ ಬಂದು ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡಿಯುವಂತಾಗಿ ಹೇಳಿದರು.
  ಈ ಸಂದರ್ಭದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಮೆರವಣಿಗೆಯ ಮೂಲಕ ಶಾಸಕರನ್ನು ಬರಮಾಡಿಕೊಂಡರು. ವೇದಿಕೆಯಲ್ಲಿ ಚಿಕ್ಕನಕೋಡ್ ಗ್ರಾ.ಪಂ ಅಧ್ಯಕ್ಷರಾದ ವಿಘ್ನೇಶ ಹೆಗಡೆ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಊರಿನ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top