• Slide
  Slide
  Slide
  previous arrow
  next arrow
 • ಯಕ್ಷಗಾನ ಆರಾಧನಾ ಕಲೆಯೊಂದಿಗೆ ಮನರಂಜನೆ ನೀಡುತ್ತದೆ: ಗೋಪಾಲ ಹುಲಿಮನೆ

  300x250 AD

  ಸಿದ್ದಾಪುರ: ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆ ಇವು ಉತ್ತಮ ಸಂದೇಶವನ್ನು ನೀಡುವುದಲ್ಲದೇ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುತ್ತದೆ. ಯಕ್ಷಗಾನ ಆರಾಧನಾ ಕಲೆ ಆಗಿರುವುದಲ್ಲದೇ ಮನರಂಜನೆಯನ್ನು ನೀಡುವುದಾಗಿದೆ ಎಂದು ಯಕ್ಷಗಾನ ಅಭಿಮಾನಿ ಗೋಪಾಲ ಹೆಗಡೆ ಹುಲಿಮನೆ ಹೇಳಿದರು.

  ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ಯಕ್ಷಚಂದನ ದಂಟಕಲ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಯಕ್ಷಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಯಕ್ಷಗಾಲ ಕಲೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅತ್ಯವಶ್ಯ ಎಂದು ಹೇಳಿದರು.

  ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೇಸರ ಅಧ್ಯಕ್ಷತೆವಹಿಸಿದ್ದರು. ಹಾರ್ಸಿಕಟ್ಟಾ ಸೇವಾಸಹಕಾರಿ ಸಂಘದ ನಿರ್ದೇಶಕ ಅಶೋಕ ಜಿ.ಹೆಗಡೆ ಹಿರೇಕೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು.

  300x250 AD

  ಸಂಸ್ಥೆಯ ಅಧ್ಯಕ್ಷೆ ಸುಜಾತಾ ಹೆಗಡೆ ದಂಟಕಲ್ ಸ್ವಾಗತಿಸಿದರು. ಶ್ರೀಪಾದ ಹೆಗಡೆ ಕಲ್ಮನೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ಪ್ರದರ್ಶನಗೊಂಡ ಕಂಸವಧೆ ಯಕ್ಷಗಾನದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ, ಶಂಕರ ಭಾಗ್ವತ್ ಯಲ್ಲಾಪುರ, ಪ್ರಸನ್ನ ಹೆಗ್ಗಾರ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ, ಸಂಜಯ ಬಿಳಿಯೂರು, ಮಹಾಬಲೇಶ್ವರ ಭಟ್ಟ ಇಟಗಿ, ನಿತಿನ್ ಹೆಗಡೆ ದಂಕಟಲ್, ನರೇಂದ್ರ ಹೆಗಡೆ ಅತ್ತಿಮುರುಡು, ಮಹಾಬಲೇಶ್ವರ ಗೌಡ ಹಾರೇಕೊಪ್ಪ, ವೆಂಕಟೇಶ ಬಗರಿಮಕ್ಕಿ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆ ಗಳಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top