ಸಿದ್ದಾಪುರ: ಬದುಕಿನಲ್ಲಿ ನಮಗೆ ಕಷ್ಟವಿರುವಾಗ ಪ್ರೋತ್ಸಾಹ ನೀಡಿ ಸಹಕರಿಸಿದವರನ್ನು ಎಂದಿಗೂ ಮರೆಯಬಾರದು. ಕೃತಜ್ಞತೆಯ ದೊಡ್ಡಗುಣ ನಮ್ಮನ್ನು ಸಂಕಷ್ಟದಿoದ ಪಾರುಮಾಡಲು ಸಾಧ್ಯ. ಅಲ್ಲಿ ದೇವರಕೃಪೆ ಖಂಡಿತಾ ಇರುತ್ತದೆ ಎಂದು ಶ್ರೀ ಶಂಕರಮಠ ಹೊಸೂರು ಇದರ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಹೇಳಿದರು.
ಅವರು ದೊಡ್ಮನೆ ಸಮೀಪದ ಹಳ್ಳೀಬೈಲ್ ಗ್ರಾಮದಲ್ಲಿ ಪ್ರಗತಿಪರ ಕೃಷಿಕ ಹಾಗೂ ಸಾಮಾಜಿಕ ಕಾರ್ಯಕರ್ತ ಜಿ.ಜಿ. ಹೆಗಡೆ ಅವರ ಪ್ರಾಂಗಣದಲ್ಲಿ ಏರ್ಪಟ್ಟ ಧನ್ಯತಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ವಕೀಲ ಎ.ಪಿ.ಭಟ್ ಮುತ್ತಿಗೆ, ಸಹಕಾರರತ್ನ ಪುರಸ್ಕೃತ ಹಿರಿಯ ಸಹಕಾರಿ ಧುರೀಣ, ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ವೈದಿಕ ವಿದ್ವಾಂಸರು, ನಿವೃತ್ತ ಶಿಕ್ಷಕರು ಆದ ಎನ್.ಟಿ.ಭಟ್ ಸಾರಂಗ, ಯಕ್ಷಗಾನ ಅರ್ಥಧಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಧರ ಭಟ್ ಗಡಿಹಿತ್ಲು, ವೈದಿಕ ವಿದ್ವಾಂಸ ವಿಶ್ವನಾಥ ಶಾಸ್ತ್ರೀ ಸಾರಂಗ, ಸಾಹಿತಿಗಳಾದ ಜಿ.ಜಿ.ಹೆಗಡೆ ಬಾಳಗೋಡ ಅವರುಗಳು ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ 35ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಲಾಯಿತು. ಕುಮರಿ ನಮ್ರತಾ, ಕುಮಾರಿ ಆಶ್ರಿತಾ ಪ್ರಾರ್ಥಿಸಿದರು. ನಮ್ರತಾ ಹೆಗಡೆ ಸ್ವಾಗತಿಸಿದರು. ಜಿ.ಜಿ. ಹೆಗಡೆ ಹಳ್ಳಿಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಹೆಗಡೆ ಹಳ್ಳಿಬೈಲ್ ವಂದಿಸಿದರು. ನ್ಯಾಯವಾದಿ ಅಜಿತ್‌ಕುಮಾರ ಮುಂಡಗೋಡ ಅವರು ನಿರೂಪಿಸಿದರು. ಈ ಕಾರ್ಯಕ್ರಮವನ್ನು ದಿವಂಗತ ಗಂಗಾಧರ ಹೆಗಡೆ, ದಿ.ಗಂಗಾ ಹೆಗಡೆ, ಮತ್ತು ದಿ. ರಾಧಾ ರಾಮಯ್ಯ ಅವರ ಸ್ಮರಣಾರ್ಥ ಧನ್ಯತಾ ಪುರಸ್ಕಾರವನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಗಣ್ಯರು ಭಾಗವಹಿಸಿ ಈ ಕಾರ್ಯಕ್ರಮದ ಕುರಿತು ಪ್ರಶಂಸಿಸಿದರು.