ಕುಮಟಾ: ಪಟ್ಟಣದ ರೈಲ್ವೇ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಶಿರಸಿಯ ಶಾಂತಿನಗರ ನಿವಾಸಿ ವಿನಾಯಕ ಕರ್ನಿಂಗ್, ಶಿರಸಿ ಗಣೇಶನಗರದ ನಿವಾಸಿ ನಿಖಿಲ ಅಂಬಿಗ (26) ಹಾಗೂ ಭಟ್ಕಳದ ಶಮಿ ಅಬ್ಬಾಸ್ ಮುಲ್ಪಾ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಪಟ್ಟಣದ ರೈಲ್ವೇ ನಿಲ್ದಾಣದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ 1.25 ಲಕ್ಷ ರೂ. ಮೌಲ್ಯದ 4 ಕೆಜಿ 76 ಗ್ರಾಂ ತೂಕದ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಮೂವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಆರೋಪಿಗಳಾದ ವಿನಾಯಕ ಕರ್ನಿಂಗ್ ಹಾಗೂ ನಿಖಿಲ ಅಂಬಿಗ ಈ ಹಿಂದೆ ಕೊಲೆ, ದರೋಡೆ, ಕಳ್ಳತನ ಹಾಗೂ ಗಾಂಜಾ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಬಂಧಿತರಾಗಿದ್ದರು ಎನ್ನಲಾಗಿದೆ. ತಹಶೀಲ್ದಾರ ವಿವೇಕ ಶೇಣ್ವಿ ನೇತೃತ್ವದಲ್ಲಿ ಪಂಚನಾಮೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಗುಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ಗಣೇಶ ನಾಯ್ಕ, ಗುರು ನಾಯಕ, ಆಸೀಫ್, ಲೋಕೇಶ ಅರಿಸಿಣಗುಪ್ಪಿ, ರಾಜು ನಾಯ್ಕ, ಶಿವಾನಂದ ಜಾಡರ, ಸಂಜೀವ ನಾಯ್ಕ ಪಾಲ್ಗೊಂಡಿದ್ದರು.