• Slide
  Slide
  Slide
  previous arrow
  next arrow
 • ನಿಯಮ ಉಲ್ಲಂಘಿಸಿ ಶಾರ್ಟ್ ರ‍್ಯಾಪ್ಟಿಂಗ್: ಕ್ರಮಕ್ಕೆ ಆಗ್ರಹ

  300x250 AD

  ದಾಂಡೇಲಿ: ದಾಂಡೇಲಿ- ಜೊಯಿಡಾದ ಪ್ರವಾಸೋದ್ಯಮಕ್ಕೆ ಮಹತ್ವದ ಶಕ್ತಿಯಾಗಿ ರ‍್ಯಾಪ್ಟಿಂಗನ್ನು ಹಣ ಮಾಡುವ ಹಪಾಹಪಿತನಕ್ಕೆ ಬಿದ್ದು, ನಿಯಮ ಮೀರಿ ನಡೆಸಲಾಗುತ್ತಿದೆ. ಇದು ಬೆಳೆಯುತ್ತಿರುವ ಪ್ರವಾಸೋದ್ಯಮಕ್ಕೆ ಮಾರಕವಾಗಬಹುದಾದ ಸಾಧ್ಯತೆ ಸ್ಪಷ್ಟವಾಗತೊಡಗಿದೆ. ಈ ಬಗ್ಗೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ವಕೀಲ ಹಾಗೂ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ವಿ.ಗಡೆಪ್ಪನವರ ಆಗ್ರಹಿಸಿದ್ದಾರೆ.
  ನಿಯಮದ ಪ್ರಕಾರ ಬೆಳಿಗ್ಗೆ ಆರಂಭವಾದ ಶಾರ್ಟ್ ರ‍್ಯಾಪ್ಟಿಂಗ್ ಸಂಜೆ 5 ಗಂಟೆಯವರೆಗೆ ಮಾತ್ರ ನಡೆಸಲು ಅವಕಾಶವಿದೆ. ಆದರೆ ಗಣೇಶಗುಡಿಯ ಇಳವಾದಲ್ಲಿ ಸಂಜೆ 6.30 ಗಂಟೆಯವರೆಗೆ ಶಾರ್ಟ್ ರ‍್ಯಾಪ್ಟಿಂಗ್ ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಭಾನುವಾರವೂ ಸಹ ಸಂಜೆ 6.30 ಗಂಟೆಯವರೆಗೆ ಶಾರ್ಟ್ ರ‍್ಯಾಪ್ಟಿಂಗ್ ನಡೆಸಿರುವುದು ಬೆಳಕಿಗೆ ಬಂದಿದ್ದು, ಎಂಟು ಜನರಿಗಿಂತ ಹೆಚ್ಚು ಜನರನ್ನು ರ‍್ಯಾಪ್ಟ್ನಲ್ಲಿ ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ಇದನ್ನು ನಿಯಂತ್ರಿಸಬೇಕಾದ ಮತ್ತು ನಿಯಮ ಮೀರಿ ಶಾರ್ಟ್ ರ‍್ಯಾಪ್ಟಿಂಗ್ ನಡೆಸುತ್ತಿರುವವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಮೌನಂ ಸಮ್ಮತಿ ಲಕ್ಷಣಂ ಎಂಬಂತಿರುವುದೇ ಇದಕ್ಕೆಲ್ಲ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.
  ಇದು ಇದೇ ರೀತಿ ಮುಂದುವರಿದರೆ ಮುಂದೆ ತಡರಾತ್ರಿಯವರೆಗೂ ಶಾರ್ಟ್ ರ‍್ಯಾಪ್ಟಿಂಗ್ ನಡೆಯಬಹುದಾದ ಸಾಧ್ಯತೆಯಿದ್ದು, ಇದು ಬಹುದೊಡ್ಡ ಅಪಾಯ, ಅವಘಡಕ್ಕೂ ಕಾರಣವಾದರೂ ಅಚ್ಚರಿಪಡಬೇಕಿಲ್ಲ. ಹಣ ಮಾಡುವ ಹಪಾಹಪಿತನಕ್ಕೆ ಮುಂದೆ ಬಿದ್ದು, ಪ್ರವಾಸಿಗರನ್ನು ಖುಷಿ ಪಡಿಸಬೇಕೆಂಬ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸಿ, ನಿಯಮ ಮೀರಿ ಶಾರ್ಟ್ ರ‍್ಯಾಪ್ಟಿಂಗ್ ನಡೆಸುವುದು ಮುಂದಿನ ದಿನಗಳಲ್ಲಿ ರ‍್ಯಾಪ್ಟಿಂಗ್ ಉದ್ಯಮದ ಮೇಲೆ ಬಹುದೊಡ್ಡ ಪರಿಣಾಮ ಬೀಳಲಿದೆ. ಈ ಪರಿಣಾಮ ನೇರವಾಗಿ ಪ್ರವಾಸೋದ್ಯಮದ ಪ್ರಗತಿಗೂ ಅಡ್ಡಗೋಡೆಯಾಗಲಿದೆ ಎಂದಿದ್ದಾರೆ. ಹೀಗಾಗಿ ನಿಯಮಗಳನ್ನು ಹೊರಡಿಸಿದ ನಂತರ ಅದರ ಜಾರಿಗೂ ಸಂಬಂಧಪಟ್ಟವರು ಅದರಲ್ಲೂ ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top