• Slide
    Slide
    Slide
    previous arrow
    next arrow
  • ಸಂಭ್ರಮ, ಸಡಗರದಲಿ ಛತ್ರಪತಿ ಶಿವಾಜಿ ಮೂರ್ತಿಯ ಅನಾವರಣ

    300x250 AD

    ದಾಂಡೇಲಿ: ನಗರದ ಸಮೀಪದ ಮೌಳಂಗಿಯಲ್ಲಿ ಶಿವಾಜಿ ಯುವಕ ಮಂಡಳದ ನೇತೃತ್ವ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಛತ್ರಪತಿ ಶ್ರೀಶಿವಾಜಿ ಮೂರ್ತಿಯ ಅನಾವರಣ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ಶುಕ್ರವಾರ ಜರುಗಿತು.
    ಛತ್ರಪತಿ ಶಿವಾಜಿ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ ಪ್ರವಾಸೋದ್ಯಮಿಗಳಾದ ಅನಿಲ್ ಪಾಟ್ನೇಕರ್ ಮತ್ತು ಶಮಲ್ ಅಬ್ದುಲ್ಲಾ ಅವರು ಛತ್ರಪತಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಹಾಗೂ ಪುಷ್ಪಗೌರವ ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮಾಜಿ ಶಾಸಕ ಸುನೀಲ ಹೆಗಡೆ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಅವರು ಶಿವಾಜಿ ಮೂರ್ತಿಗೆ ಮಾಲಾರ್ಪಣೆಯ ಜೊತೆಗೆ ಪುಷ್ಪಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
    ಬೆಳಿಗ್ಗೆ ಪ್ರಥಮವಾಗಿ ಭೇಟಿ ನೀಡಿದ ಸುನೀಲ ಹೆಗಡೆ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಪ್ರತಿಯೊಬ್ಬ ಹಿಂದೂ ಧರ್ಮಿಯರು ಸದಾ ಆರಾಧಿಸಬೇಕಾದ ಹಿಂದೂ ಧರ್ಮದ ಮಹೋನ್ನತ ಶಕ್ತಿ ಮತ್ತು ಹಿಂದವಿ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು. ಅಂದು ಶಿವಾಜಿ ಮಹಾರಾಜರು ಎದೆಯೊಡ್ಡಿ ಹೋರಾಟ ಮಾಡಿದ ಫಲವಾಗಿ ಇಂದು ನಾವು ನೀವೆಲ್ಲ ಕೇಸರಿ ಶಾಲು, ಕೇಸರಿ ಪೇಟ ಧರಿಸಲು ಸಾಧ್ಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಧರ್ಮಸಂಸ್ಥಾಪನೆಗಾಗಿ ದಿಟ್ಟ ಹೋರಾಟ ಮಾಡಿರುವುದನ್ನು ಪ್ರತಿಯೊಬ್ಬ ಹಿಂದೂ ಬಾಂಧವರು ಸ್ಮರಿಸಬೇಕೆಂದರು.
    ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ್, ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೂ ಅವರ ಆಡಳಿತಾವಧಿಯಲ್ಲಿ ಹಿಂದೂಗಳು ಮಾತ್ರವಲ್ಲ, ಮುಸ್ಲಿಂರು ಕೂಡ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿದ್ದರು. ಶಿವಾಜಿ ಮಹಾರಾಜರು ಹಿಂದೂಗಳಿಗೆ ದೇವಾಲಯ ನಿರ್ಮಿಸಲು ಸಹಕರಿಸುತ್ತಿದ್ದಂತೆ ಮುಸ್ಲಿಂರಿಗೆ ಮಸೀದಿಯನ್ನು ನಿರ್ಮಿಸಲು ಸಹಕಾರವನ್ನು ನೀಡುತ್ತಿದ್ದರು. ಶಿವಾಜಿಯವರ ಸೈನ್ಯದಲ್ಲಿ ಹಿಂದೂ ಸೈನಿಕರಂತೆ ಮುಸ್ಲಿಂ ಸೈನಿಕರು ಇದ್ದರು. ಪರಸ್ಪರ ಧರ್ಮ ಸಾಮಾರಸ್ಯದ ಮೂಲಕ ಆಡಳಿತ ನಡೆಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲಬೇಕು. ಮೌಳಂಗಿಯoತಹ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಕಾರ್ಯ ಅಭಿನಂದನೀಯ ಎಂದರು.
    ಮೂರ್ತಿ ಕೊಡುಗೆಯಾಗಿ ನೀಡಿದ ಪ್ರವಾಸೋದ್ಯಮಿಗಳಾದ ಅನಿಲ್ ಪಾಟ್ನೇಕರ್ ಮತ್ತು ಶಮಲ್ ಅಬ್ದುಲ್ಲಾ, ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ನೆರವು ನೀಡಿದ ಉದ್ಯಮಿ ದತ್ತಾತ್ರೇಯ ಥೊರವತ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್, ಉದ್ಯಮಿ ಟಿ.ಆರ್.ಚಂದ್ರಶೇಖರ್, ಎಎಸ್‌ಐ ಮಹಾವೀರ ಕಾಂಬಳೆ, ನಗರಸಭಾ ಸದಸ್ಯ ಮೌಲಾಲಿ ಮುಲ್ಲಾ, ಅವೇಡಾ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಗದ್ದಿ, ಗ್ರಾ.ಪಂ ಸದಸ್ಯರುಗಳಾದ ಅಜಿತ್ ಥೋರವತ್, ಸುನೀಲ ಕಾಂಬಳೆ ಮೊದಲಾದವರನ್ನು ಹಾಗೂ ಇನ್ನೂ ಅನೇಕ ಮಹನೀಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
    ಮೌಳಂಗಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ವಿನೋದ್ ಮೈನಾಗೋಳ ಅವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ದಾಜಿಬಾ ಥೋರವತ್ ಅತಿಥಿಗಳನ್ನು ಪರಿಚಯಿಸಿದರು. ಕನ್ಯಾ ವಿದ್ಯಾಲಯದ ಪ್ರಾಚಾರ್ಯ ಹನುಮಂತ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.
    ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಜಿ.ಪ.ಸ ವಾಮನ ಮಿರಾಶಿ, ಮಾಜಿ ತಾ.ಪ.ಸ ಬಾಳು ಪಾಟೀಲ್, ಪ್ರಮುಖರುಗಳಾದ ಕಲ್ಲಪ್ಪ ಥೋರವತ್, ರಾಜರಾಮ್ ಥೋರವತ್, ಸಹದೇವ ಕಾಂಬಳೆ, ಜ್ಯೋತಿಬಾ ಚೌವ್ಹಾಣ್, ಮಹಾದೇವ, ಪುಂಡಲೀಕ್ ತೋರವತ್, ಬಾಪುರಾವ್ ಥೋರವತ್ ಮುಂತಾದವರು ಇದ್ದರು.

    ಧರ್ಮ ಸಮನ್ವಯತೆ ಮೆರೆದ ಅನಿಲ್- ಶಮಲ್
    ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕರು ಮತ್ತು ತನ್ನ ಆಡಳಿತಾವಧಿಯಲ್ಲಿ ಸರ್ವಧರ್ಮ ಸಮನ್ವಯತೆಯ ಆಡಳಿತವನ್ನು ನಡೆಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಅನಿಲ್ ಪಾಟ್ನೇಕರ್ ಮತ್ತು ಶಮಲ್ ಅಬ್ದಲ್ಲಾ ಅವರು ನೀಡಿ ಹಿಂದೂ-ಮುಸ್ಲಿಂ ಧರ್ಮ ಸಮನ್ವಯತೆಯನ್ನು ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top