Slide
Slide
Slide
previous arrow
next arrow

ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ.18ಕ್ಕೆ: ಸಂಪತ್‌ಕುಮಾರ್

300x250 AD

ಕುಮಟಾ: ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿಯವರ ಹುಟ್ಟು ಹಬ್ಬದ ನಿಮಿತ್ತ ಡಿ.18ರಂದು ಪಟ್ಟಣದ ರಾಜೇಂದ್ರ ಪ್ರಸಾದ ಹಾಲ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಸೂರಜ ಸೋನಿ ಗೆಳೆಯರ ಬಳಗದ ಸಂಚಾಲಕ ಸಂಪತ್‌ಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಪತ್‌ಕುಮಾರ ಅವರು ಗೆಳೆಯ ಸೂರಜ ಸೋನಿಯವರ ಹುಟ್ಟು ಹಬ್ಬದ ನಿಮಿತ್ತ ಪ್ರತಿವರ್ಷ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಈ ವರ್ಷ ಮಂಗಳೂರಿನ ಸುರತ್ಕಲ್‌ನ ಶ್ರೀನಿವಾಸ ಮೆಡಿಕಲ್ ಕಾಲೇಜ್ ನ ಸಹಕಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಿದ್ದೇವೆ. ಡಿ.18ರ ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 2 ಗಂಟೆಯವರೆಗೆ ಗಿಬ್ ಹೈಸ್ಕೂಲ್‌ನ ಡಾ.ರಾಜೇಂದ್ರ ಪ್ರಸಾದ ಹಾಲ್‌ನಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

ಜೆಡಿಎಸ್ ಕುಮಟಾ ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ ಮಾತನಾಡಿ, ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಹತ್ವ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಈ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದಲೇ ಈ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀನಿವಾಸ ಮೆಡಿಕಲ್ ಕಾಲೇಜ್‌ನ ನುರಿತ ವೈದ್ಯರ ತಂಡದಿಂದ ನಡೆಸಲಿದ್ದೇವೆ. ಡಾ. ಸುಬ್ರಹ್ಮಣ್ಯಂ ನೇತೃತ್ವದ ತಂಡದಿಂದ ಹೃದ್ರೋಗ, ಶ್ವಾಸಕೋಶ, ಚರ್ಮ ರೋಗ, ಮೂಲವ್ಯಾಧಿ, ಸಂದಿವಾತ, ಉದರ ಸಂಬಂಧಿತ ಕಾಯಿಲೆ, ಶಸ್ತ್ರ ಚಿಕಿತ್ಸೆ ಸೇರಿದಂತೆ ವಿಭಿನ್ನ ರೋಗಗಳಿಗೆ ತಪಾಸಣೆ ಮತ್ತು ಔಷಧೋಪಚಾರ ಮಾಡಲಾಗುವುದು. ಈ ಭಾಗದ ಜನರು ಶಿಬಿರದ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.

ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ನನ್ನ ಗೆಳೆಯರ ಬಳಗದವರು ಮತ್ತು ಜೆಡಿಎಸ್ ಪಕ್ಷದ ಮುಖಂಡರೆಲ್ಲರೂ ಸೇರಿ ಈ ಆರೋಗ್ಯ ತಪಾಸಣಾ ಶಿಬಿರವನ್ನು ಸಂಘಟಿಸಿದ್ದಾರೆ. ಪ್ರತಿವರ್ಷ ವಿಭಿನ್ನವಾಗಿ ಸಾಮಾಜಿಕ ಕಾರ್ಯಗಳ ಮೂಲಕ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ವರ್ಷ ಆರೋಗ್ಯ ಸೇವೆಯನ್ನೆ ಮೂಲ ಉದ್ದೇಶವಾಗಿಟ್ಟಿಕೊಂಡಿದ್ದೇವೆ. ಎಲ್ಲ ರೀತಿಯ ನೂರಿತ ವೈದ್ಯರ ತಂಡ ಬರಲಿದೆ. ಆರೋಗ್ಯ ಕಾರ್ಡ್ನ್ನು ಕೂಡ ನೀಡಲಾಗುವುದು. ಈ ಕಾರ್ಡ್ ಮೂಲಕ ರಿಯಾಯಿತಿ ದರದಲ್ಲಿ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಈ ಸೌಲಭ್ಯದ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ವಿನಂತಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪತ್‌ಕುಮಾರ ಮೊ.ಸಂ: 9845574720, ಅಣ್ಣಪ್ಪ ನಾಯ್ಕ ಮೊ.ಸಂ: 9591464957 ಸಂಪರ್ಕಿಸಬಹುದು ಎಂದರು.

300x250 AD

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ಜಿ ಕೆ ಪಟಗಾರ, ಸತೀಶ್ ಮಹಾಲೆ, ಸೋನಿ ಗೆಳೆಯರ ಬಳಗದ ಅಣ್ಣಪ್ಪ ನಾಯ್ಕ, ಶಿವರಾಮ, ಸಚಿನ್, ಈಶ್ವರ, ಹರಿಶ್ಚಂದ್ರ, ರಾಮ, ಮಂಜುನಾಥ, ರವಿ, ಮಾರುತಿ, ಗಜಾನನ, ಗಿರೀಶ್ ಇತರರು ಇದ್ದರು.

Share This
300x250 AD
300x250 AD
300x250 AD
Back to top